Ad Widget .

ಬೆಂಗಳೂರು ಅತ್ಯಾಚಾರ ಪ್ರಕರಣಕ್ಕೆ ಘಳಿಗೆಗೊಂದು ಟ್ವಿಸ್ಟ್ | ಸಂತ್ರಸ್ತೆಯ ಬಳಿಯಿದ್ದ ನಗದು ದೋಚಿದರೇ ಪೊಲೀಸರು…!?

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಾಖಲಾದ ನಿರ್ಭಯ ಮಾದರಿ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಘಳಿಗೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತೆ ಮತ್ತು ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂಬ ಸುದ್ದಿ ಬಯಲಾದ ಬೆನ್ನಲ್ಲೇ ಇದೀಗ ಸಂತ್ರಸ್ತೆ ಬಳಿಯಿಂದ ಪೊಲೀಸರು ನಗದು ದೋಚಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Ad Widget . Ad Widget .

ಬೆಂಗಳೂರಿನಲ್ಲಿ ತಮ್ಮ ಕೈಸೇರಿದ್ದ, ಬಾಂಗ್ಲಾ ಮೂಲದ ಆರು ಜನ ಯುವಕರು, ಇಬ್ಬರು ಯುವತಿಯರೊಂದಿಗೆ ಸೇರಿ, ಒಳ ದ್ವೇಷದಿಂದ ತಮ್ಮ ಸ್ನೇಹಿತೆಯನ್ನೇ ಅತ್ಯಾಚಾರ ಮಾಡಿ ಆಕೆಯ ಗುಪ್ತಾಂಗಕ್ಕೆ ಮಧ್ಯದ ಬಾಟಲಿ ತುರುಕಿ ವಿಕೃತಿ ಮೆರೆದಿದ್ದ ವಿಡಿಯೋದ, ಜಾಡು ಹಿಡಿದಿದ್ದ ಪೊಲೀಸರಿಗೆ ಪ್ರಕರಣದ ಹಿಂದೆ ವೇಶ್ಯಾವಾಟಿಕೆ ಜಾಲವಿರುವ ವಿಷಯ ಅರಿವಾಗಿತ್ತು. ಇಂದು ಬೆಳಿಗ್ಗೆ ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದಾಗ ಸ್ವ ರಕ್ಷಣೆಗಾಗಿ ಪೊಲೀಸರು ವಿಕೃತರ ಮೇಲೆ ಫೈರಿಂಗ್ ನಡೆಸಿ ಆಸ್ಪತ್ರೆಗೆ ದಾಖಲಿಸಿದ ಪ್ರಸಂಗವೂ ನಡೆದುಹೋಗಿದೆ.

Ad Widget . Ad Widget .

ಇದೀಗ ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದ್ದು, ಸದ್ಯ ಕೇರಳದ ಗೆಳೆಯನ ಮನೆಯಲ್ಲಿ ತಂಗಿರುವ ಬಾಂಗ್ಲಾ ಮೂಲದ ಸಂತ್ರಸ್ತೆ ಯುವತಿ, ಗೆಳೆಯನೊಂದಿಗೆ ಕಲ್ಲಿಕೋಟೆಗೆ ತೆರಳುತ್ತಿರುವಾಗ ಕೆಆರ್ ಪುರ ಪೊಲೀಸರು ಅನುಮಾನಾಸ್ಪದವಾಗಿ ಬಂದಿಸಿ ಆಕೆಯ ಬಳಿಯಿಂದ 80 ಸಾವಿರ ರೂ. ಕಸಿದ ಬಗ್ಗೆ ವರದಿಯಾಗಿದೆ.
ಕೆಆರ್ ಪುರ ಪೊಲೀಸರು ಅನುಮಾನದಿಂದ ಠಾಣೆಯಲ್ಲಿ ಸಂತ್ರಸ್ತೆಯನ್ನು ವಿಚಾರಣೆಗೊಳಪಡಿಸಿದಾಗ ಅವರ ಬಳಿ ಇದ್ದ ದೌರ್ಜನ್ಯದ ವಿಡಿಯೋ ಸಿಕ್ಕಿದೆ. ಇವರ ವರ್ತನೆ ಗಮನಿಸಿದ ಪೊಲೀಸರು ಇವರು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರು ಎಂದು ಹಣ ವಸೂಲಿ ಮಾಡಿದ್ದಾರೆ. ಇದೀಗ ಪೊಲೀಸರ ಈ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದ್ದು ಕೆಆರ್ ಪುರ ಪೊಲೀಸರ ವಿರುದ್ಧವೇ ಪೊಲೀಸ್ ತನಿಖೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *