ಮಂಗಳೂರು: ತಾಲೂಕಿನ ಪಾವೂರಿನಲ್ಲಿ, ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ, ಮೆಹಂದಿ ಡಿಜೆ ಪಾರ್ಟಿ ನಡೆಸಿದವರ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ.20 ರಂದು ಶೋಭಾ ಮತ್ತು ಕೌಶಲ್ ಎಂಬವರು ಮದುವೆಗೆ ಪಾವೂರು ಗ್ರಾಮ ಪಂಚಾಯತಿಯಿಂದ ಷರತ್ತು ಭದ್ದ ಅನುಮತಿ ನೀಡಲಾಗಿತ್ತು. ಆದರೆ ಮೇ 19 ರಂದು ರಾತ್ರಿ ಮೆಹಂದಿ ಕಾರ್ಯಕ್ರಮದ ಅನುಮತಿ ಇಲ್ಲದಿದ್ದರೂ ದ್ವನಿವರ್ಧಕ ಬಳಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೆ ಹೆಚ್ಚಿನ ಜನ ಸೇರಿಸಿ ನೃತ್ಯ ಮಾಡಿರುತ್ತಾರೆ.
ಈ ರೀತಿಯಾಗಿ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾವೂರು ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಸುಧಾರಣಿ ಅವರು ನೀಡಿದ ದೂರಿನನ್ವಯ ಕೊಣಾಜೆ ಠಾಣಾ ಪೊಲೀಸರು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.