ದಾವಣಗೆರೆ: ರಾಜ್ಯದ ಹೆಚ್ಚಿನ ಶಾಸಕರು ಮತ್ತು ಸಂಸದರುಗಳು ಇಂತಹ ಕಠಿಣ ತುರ್ತು ಪರಿಸ್ಥಿತಿಯಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿರುವ ಈ ಸಂದರ್ಭದಲ್ಲಿ , ತಮ್ಮ ಕ್ಷೇತ್ರದ ಜನರ ಸೇವೆಗೆ ನಿಂತಿರುವ ಕೆಲವೇ ಕೆಲವು ಶಾಸಕ, ಸಂಸದರಲ್ಲಿ ರೇಣುಕಾಚಾರ್ಯ ಒಬ್ಬರು.
ಹೌದು, ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರವ ಎಂ.ಪಿ. ರೇಣುಕಾಚಾರ್ಯ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರೂ, ಅವರು ಬೆಂಗಳೂರಿನಲ್ಲಿ ಕಾಲ ಕಳೆಯದೆ ತನ್ನ ಸ್ವ ಕ್ಷೇತ್ರದ ಕೊರೋನಾ ಸೋಂಕಿತರ ಸೇವೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಿನ್ನೆ ದಿನ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹ ಹೊತ್ತ ಆಂಬುಲೆನ್ಸ್ ಚಲಾಯಿಸುವ ಮೂಲಕ ಒಬ್ಬ ಶಾಸಕ ಹೀಗೂ ಇರಬಹುದೇ ಎಂಬ ಅಚ್ಚರಿ ಮೂಡಿಸಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿ, ಕಳೆದೆರಡು ವಾರಗಳಿಂದ ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಘಪರಿವಾರದ ಕಾರ್ಯಕರ್ತ ರೊಬ್ಬರ, ತಾಯಿ ನಿನ್ನೆ ಮೃತಪಟ್ಟಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಶಾಸಕ ರೇಣುಕಾಚಾರ್ಯ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ, ಮೃತದೇಹವನ್ನು ಹೊತ್ತ ಆಯಂಬುಲೆನ್ಸ್ನ್ನು ಸ್ವತಃ ಚಾಲನೆ ಮಾಡಿಕೊಂಡು ಚಿತಾಗಾರಕ್ಕೆ ಕೊಂಡೊಯ್ದಿದ್ದಾರೆ.
ಅದಲ್ಲದೆ, ಅವರು ಕೊವಿಡ್ನಿಂದ ಮೃತಪಟ್ಟವರ ಮೃತದೇಹ ಹೊತ್ತ ಆಯಂಬುಲೆನ್ಸ್ ಚಾಲನೆ ಮಾಡಿ ಚಿತಾಗಾರಕ್ಕೆ ಕೊಂಡೊಯ್ದ ಇನ್ನೊಂದು ಘಟನೆಯೂ ನನ್ನೆ ನಡೆದಿದೆ.
ತನ್ನ ಕ್ಷೇತ್ರದ ಸವಳಂಗ ಗ್ರಾಮದ ಯುವಕನೋರ್ವ ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ರೇಣುಕಾಚಾರ್ಯ, ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪಿಪಿಇ ಕಿಟ್ ಮತ್ತು ಅಂತ್ಯಸಂಸ್ಕಾರದ ಖರ್ಚಿಗೆ ವೈಯಕ್ತಿಕವಾಗಿ ₹15,000 ನೀಡಿ, ತಮ್ಮ ತಂದೆ, ತಾಯಿ ಸ್ಮರಣಾರ್ಥ ಉಚಿತವಾಗಿ ನೀಡಿರುವ ಅಂಬುಲೆನ್ಸ್ನಲ್ಲಿ ಮೃತದೇಹವನ್ನು ಹಾಕಿಕೊಂಡು ತಾವೇ ಸ್ವತಃ ಚಾಲನೆ ಮಾಡಿ ಚಿತಾಗಾರಕ್ಕೆ ತಲುಪಿಸಿದ್ದಾರೆ.
ಇದಲ್ಲದೆ ಈ ತುರ್ತು ಪರಿಸ್ಥಿತಿಯಲ್ಲಿ ಸದಾ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿರುವ ಶಾಸಕರು ಇತರರಿಗೆ ಮಾದರಿಯಾಗಿದ್ದಾರೆ.