Ad Widget .

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ

ಸುಳ್ಯ: ಅತ್ತೆ ಮತ್ತು ಸೊಸೆಯ ಜಗಳ ಮಾವಿನ ಹಣ್ಣಿನಿಂದ ಶುರುವಾಗಿ ಕೊನೆಗೆ ಸೊಸೆ ಅತ್ತೆಯ ಮುಖಕ್ಕೆ ಮೆಣಸಿನ ಹುಡಿ ನೀರಿನಲ್ಲಿ ಬೆರೆಸಿ ಮುಖಕ್ಕೆ ಎರಚಿದ ಘಟನೆ ಸುಳ್ಯ, ಪೈಚಾರಿನಲ್ಲಿ ನಡೆದಿದೆ.
ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಕೃತ್ಯ ಎಸಗಿದ ಆರೋಪಿ. ಇವರು ಇಸ್ಮಾಯಿಲ್ ರವರ ತಾಯಿ ಮೇಲೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ್ದಾರೆ. ಇಸ್ಮಾಯಿಲ್ ಮತ್ತು ಅಬ್ದುಲ್ ರವರು ಸಹೋದರರಾಗಿದ್ದು ಪೈಚಾರಿನಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ ಇವರ ತಾಯಿ ಅಬ್ದುಲ್ ರವರ ಮನೆಯಲ್ಲಿ ವಾಸಿಸುತ್ತಿದ್ದರು.
ಈ ಸಹೋದರರ ತಾಯಿ ಮೇ. ೨೬ ರಂದು ತನ್ನ ಮೊಮ್ಮಕ್ಕಳು ಅಂದರೆ ಅಬ್ದುಲ್ ರವರ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದು ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಇಸ್ಮಾಯಿಲ್ ರವರ ಪತ್ನಿ ಮೈಮೂನ ಮೆಣಸಿನ ಪುಡಿ ಯನ್ನು ಬಿಸಿ ನೀರಿಗೆ ಹಾಕಿ ತನ್ನ ಅತ್ತೆಯ ಮೇಲೆಯೇ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ಮಾಯಿಲ್ ಮತ್ತು ಅಬ್ದುಲ್ಲರ ಮಧ್ಯೆ ಈ ಹಿಂದೆಯೇ ಜಾಗದ ವಿಷಯಕ್ಕೆ ಸಂಭಂದಿಸಿದಂತೆ ವಿವಾದ ಉಂಟಾಗಿ ಗಲಾಟೆಯಾಗಿದ್ದು ಅದನ್ನು ಸ್ಥಳೀಯರು ರಾಜಿ ಪಂಚಾತಿಕೆ ನಡೆಸಿ ಪರಿಹರಿಸಿದ್ದರು ಎಂದು ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *