ಬೆಂಗಳೂರು: ಕರಾವಳಿಯ ಜನತೆಗೆ ಮುಂದಿನ ನವೆಂಬರ್ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಂಪು ಕುಚ್ಚಲಕ್ಕಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಕರಾವಳಿ ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಣೆ ಬಗ್ಗೆ ಸರ್ಕಾರದ ಬೆನ್ನುಹತ್ತಿದ್ದ ಸಚಿವರು, ಈ ಬಗ್ಗೆ ಆಹಾರ ಸಚಿವರಲ್ಲಿ ಚರ್ಚಿಸಿ ಮುಂದಿನ ನವಂಬರ್ ತಿಂಗಳಿನಿಂದ, ಕರಾವಳಿಯ ಜನತೆ ನಿತ್ಯ ಸೇವಿಸುವ ಕೆಂಪು ಕುಚ್ಚುಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ದಕ್ಷ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ವಿತರಣೆಯಾಗುತ್ತಿದೆ ಅಕ್ಕಿಯನ್ನು ಜನರು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆಗಿರುವ, ಕರಾವಳಿಯ ಜನಪ್ರಿಯ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.