ಮಂಗಳೂರು: ಕೊರೋನಾ ಎರಡನೆಯ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಈ ನಡುವೆ ಸರ್ಕಾರದ ಆದೇಶ ಮೀರಿ ಸಾಲ ಮರುಪಾವತಿ ಮಾಡುವಂತೆ ಸಾಲಗಾರರಿಗೆ ಒತ್ತಡ ಹೇರಿದರೆ, ಅಂತಹ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಅಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಲಾಕ್ಡೌನ್ ಇರುವ ಕಾರಣ ಜನಸಾಮಾನ್ಯರಿಗೆ ಕೆಲಸ ಇಲ್ಲದೆ ಸಂಪಾದನೆ ಇಲ್ಲದಂತಾಗಿದೆ. ದುಡಿಮೆಯನ್ನೇ ನಂಬಿಕೊಂಡಿದ್ದ ಜನತೆ ಸಾಲ ಮರುಪಾವತಿಗೆ ಹಣವಿಲ್ಲದಾಗಿದೆ, ಆ ಕಾರಣಕ್ಕಾಗಿ ಸಾರ್ವಜನಿಕರ ಹಿತ ಕಾಯ್ದುಕೊಂಡಿರುವ ರಾಜ್ಯ ಸರ್ಕಾರ ಮುಂದಿನ ನಿರ್ದಿಷ್ಟ ಅವಧಿಯವರೆಗೆ ಸಾಲ ಮರುಪಾವತಿಗೆ ಒತ್ತಾಯ ಮಾಡಬಾರದು ಎಂದು ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಆದೇಶ ನೀಡಿದ್ದು, ಇದರ ಹೊರತಾಗಿಯೂ ಸಂಸ್ಥೆಗಳು ಸಾಲ ವಸೂಲಾತಿಗೆ ಮುಂದಾದರೆ ಅಂತಹ ಸಂಸ್ಥೆಗಳ ವಿರುದ್ಧ ದೂರು ನೀಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಆದೇಶ ಪ್ರತಿ :