Ad Widget .

ವೈದ್ಯನ ನರಳಾಟ ನೋಡಿಯೂ‌ ಕಾಲ್ಕಿತ್ತ‌ ಬಿಜೆಪಿ ಶಾಸಕ | ಇವರೇನಾ ಜನಪ್ರತಿನಿಧಿಗಳು?

ಚಿಕ್ಕಮಗಳೂರು.: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವೈದ್ಯರನ್ನು ನೋಡಿಯೂ ನೋಡದಂತೆ ತೆರಳಿದ್ದ ಬಿಜೆಪಿ ಶಾಸಕರೋರ್ವರ ನಡೆಯಿಂದಾಗಿ ವೈದ್ಯ ಕೊನೆಯುಸಿರೆಳೆದ ಘಟನೆ ಇಲ್ಲಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದೆ.
ಮಧ್ಯಾಹ್ನ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಎಂಬವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮದ್ಯೆ ಅವರ ವಾಹನ ಅಪಘಾತಕ್ಕೆ ಈಡಾಗಿದೆ. ಅಪಘಾತದ ರಭಸಕ್ಕೆ ವೈದ್ಯ ರಮೇಶ್ ರಸ್ತೆಗುರುಳಿದ್ದು, ಅದೇ ವೇಳೆಗೆ ಸ್ಥಳೀಯ ಶಾಸಕ ಡಿ.ಎಸ್. ಸುರೇಶ್ ಕಾರಲ್ಲಿ ಆಗಮಿಸಿದ್ದು, ವೈದ್ಯರ ಸ್ಥಿತಿ ನೋಡಿಯೂ ನೋಡದಂತೆ ತೆರಳಿದ್ದರು.

Ad Widget . Ad Widget .

ಸೌಜನ್ಯಕ್ಕೂ ಕಾರಿನಿಂದಿಳಿಯದ ಶಾಸಕರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಅರ್ಧ ಗಂಟೆ ಬಳಿಕ ಬಂದ ಅಂಬ್ಯುಲೆನ್ಸ್ ನಲ್ಲಿ ವೈದ್ಯರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ರಕ್ತಸ್ರಾವದಿಂದ ದಾರಿಮದ್ಯೆ ವೈದ್ಯರು ಕೊನೆಯುಸಿರೆಳೆದಿದ್ದು, ಕೊರೊನ ಸಮಯದಲ್ಲಿ ಓರ್ವ ಪ್ರಾಮಾಣಿಕ ವಾರಿಯರ್ ನ ನಷ್ಟವಾಗಿದೆ. ಜನಪ್ರತಿನಿಧಿಯ ನಿಕೃಷ್ಟ ಮನಸ್ಥಿತಿಗೆ ಇವರೇನಾ ನಾವು ಮತ ನೀಡಿದ ಮಹಾಪ್ರಭು ಎಂದು ಚಿಕ್ಕಮಗಳೂರು ಜನರು ಆಡಿಕೊಳ್ಳುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *