Ad Widget .

ಬೆಲೂನ್ ಗೆ ನಾಯಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಅರೆಸ್ಟ್

ನವದೆಹಲಿ: ಯೂಟ್ಯೂಬ್ ನಲ್ಲಿ ಲೈಕ್ಸ್ ಪಡೆದುಕೊಳ್ಳಲು ಜನ ಏನೆಲ್ಲ ಕಸರತ್ತು ಮಾಡುವುದು ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿದೆ. ಕೆಲವರು ತಮ್ಮ ತಮ್ಮ ಪ್ರತಿಭೆಯ ಮೂಲಕ ಯೂಟ್ಯೂಬ್ ನಲ್ಲಿ ಖ್ಯಾತಿ ಪಡೆಯುತ್ತಿದ್ದರೆ ಇನ್ನು ಕೆಲವರು, ಇತರರ ಹಾಗು ಕೆಲ ಜೀವಿಗಳ ಜೀವದ ಜೊತೆ ಚೆಲ್ಲಾಟವಾಡಿ ಪ್ರಸಿದ್ಧಿ ಪಡೆಯಲು ಪ್ರಯತ್ನಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಯುವಕ  ತನ್ನ ಸಾಕು ನಾಯಿಗೆ ಹಲವಾರು ಹೈಡ್ರೋಜನ್ ಗ್ಯಾಸ್ ಬಲೂನ್ ಗಳನ್ನು ಕಟ್ಟಿ ಅದನ್ನು ಹಾರುವಂತೆ ಮಾಡಿದ್ದು, ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿ ಲೈಕ್ಸ್ ಪಡೆಯುತ್ತಿದ್ದಂತೆ ಪೊಲೀಸರ ಅತಿಥಿಯಾಗಿದ್ದಾನೆ.

Ad Widget . Ad Widget .


ಆರೋಪಿ, ದೆಹಲಿ ಮೂಲದ ಯೂಟ್ಯೂಬರ್ ಗೌರವ್ ಜಾನ್,  ತನ್ನ ಯೂಟ್ಯೂಬ್ ಚಾನೆಲ್ ಗಾಗಿ ಸ್ಥಳೀಯ ಪಾರ್ಕ್ ಒಂದರಲ್ಲಿ ತನ್ನ ಸಾಕು ನಾಯಿಯನ್ನು ಹೈಡ್ರೋಜನ್ ಗ್ಯಾಸ್ ಬಲೂನ್ ಗಳಿಂದ ಕಟ್ಟಿ ಮೇಲಕ್ಕೆ ಹಾರಿಸುವ ವಿಡಿಯೋವನ್ನು ಮಾಡಿದ್ದ. ವಿಡಿಯೋದಲ್ಲಿ ನಾಯಿ ಕೆಲವು ಕ್ಷಣಗಳ ಕಾಲ ಗಾಳಿಯಲ್ಲಿ ತೇಲಾಡುತ್ತಿರುವ ದೃಶ್ಯವಿದ್ದು, ಗೌರವ್ ತಾಯಿ ಮೇಲಕ್ಕೆ ಹಾರಿಸಲು ಹುರಿದುಂಬಿಸುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದು, ಪ್ರಾಣಿ ದಯಾ ಸಂಘಟನೆಗಳ ದೂರಿನ ನಂತರ ವಿಡಿಯೋವನ್ನು ತೆಗೆದು ಹಾಕಿದ್ದಾನೆ.

Ad Widget . Ad Widget .

ವಿಡಿಯೋದ ಬಗ್ಗೆ ಪಿಎಫ್ ಎ(ಪೀಪಲ್ ಫಾರ್ ಆ್ಯನಿಮಲ್) ಸಂಘಟನೆಯ ಸದಸ್ಯರು ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ನಂತರ ಪೊಲೀಸರು ಗೌರವ್ ನನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *