Ad Widget .

ಹೊಸ ಐಟಿ ನೀತಿ ಗ್ರಾಹಕರ ಖಾಸಗಿತನಕ್ಕೆ ದಕ್ಕೆಯುಂಟುಮಾಡಲಿದೆ | ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಪ್

ಹೊಸದಿಲ್ಲಿ: ಕೇಂದ್ರ ಸರ್ಕಾರ ಇಂದಿನಿಂದಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಐಟಿ ನೀತಿ ವಿರೋದಿಸಿ ವಾಟ್ಸಾಪ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಹೊಸ ನಿಯಮವು ವಾಟ್ಸಪ್ ಗ್ರಾಹಕರ ಖಾಸಗಿತನಕ್ಕೆ ದಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಹೊಸ ನಿಯಮದ ಪ್ರಕಾರ ನಾವು ಸಂದೇಶ ಕಳುಹಿಸಿದ ಮೂಲಗಳನ್ನು ಕಂಡುಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ. ಸಾಮಾಜಿಕ ಮಾಧ್ಯಮಗಳು ಅಧಿಕಾರಿಗಳು ಬಯಸಿದ ಸಂದರ್ಭದಲ್ಲಿ ಸಂದೇಶವೊಂದರ ಮೊದಲ ಮೂಲ ಸೃಷ್ಟಿಕರ್ತನನ್ನು ಪತ್ತೆಹಚ್ಚುವುದು ಅಗತ್ಯ ಎಂದು ಐಟಿ ನಿಯಮದಲ್ಲಿ ಹೇಳಲಾಗಿದೆ. ಇದು ಭಾರತ ಸಂವಿಧಾನದ ಅಡಿಯಲ್ಲಿನ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

Ad Widget . Ad Widget .

ಸಂದೇಶಗಳ ಮೂಲ ಪತ್ತೆ ಮಾಡಿ ಎಂದು ಸೂಚಿಸುವುದು, ವಾಟ್ಸಾಪ್‌ನಲ್ಲಿ ಕಳುಹಿಸುವ ಪ್ರತಿ ಸಂದೇಶದ ಬೆರಳಚ್ಚಿನ ಗುರುತು ಸಂಗ್ರಹಿಸಿ ಇರಿಸಿ ಎಂದು ಹೇಳುವಂತಾಗಿದೆ. ಇದರಿಂದ ಎಂಡ್ ಟು ಎಂಡ್ ಎನ್‌ಕ್ರಿಪ್ಪನ್ ನಿಯಮವನ್ನು ಉಲ್ಲಂಘನೆಯಾಗಲಿದೆ ಹಾಗೂ ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಲಿದೆ ಎಂದಿದೆ.

Ad Widget . Ad Widget .

ವಾಟ್ಸಪ್ ಜನರನ್ನು ಸುರಕ್ಷಿತವಾಗಿಡುವುದರ ಜೊತೆಯಲ್ಲಿ, ಲಭ್ಯವಿರುವ ಕಾನೂನಾತ್ಮಕ ಮನವಿಗಳಿಗೆ ಸ್ಪಂದಿಸುವ ಪರಿಹಾರಾತ್ಮಕ ಕಾರ್ಯಗಳನ್ನು ಸಹ ಭಾರತ ಸರ್ಕಾರದೊಂದಿಗೆ ಮುಂದುವರಿಸುತ್ತಿದೆ ಎಂದು ಅದು ತಿಳಿಸಿದೆ.

Leave a Comment

Your email address will not be published. Required fields are marked *