Ad Widget .

ಆನ್ ಲೈನ್ ಕ್ಲಾಸ್ ವೇಳೆ ಅರೆಬೆತ್ತಲೆ ಶೋ | ಕಾಮುಕ ಉಪನ್ಯಾಸಕ ಅರೆಸ್ಟ್

ಚೆನ್ನೈ: ಈತ ವೃತ್ತಿಯಲ್ಲಿ ಶಿಕ್ಷಕ. ಆದರೆ ಮಾಡಿರುವುದು ಖಚಡಾ ಕೆಲಸ. ಹೌದು, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈನಲ್ಲಿ ಸೋಮವಾರ ನಡೆದಿದೆ.

Ad Widget . Ad Widget .

ಜಿ.ರಾಜಗೋಪಾಲನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈತನ ವಿರುದ್ಧ ದೂರಿದ್ದಾರೆ. ತರಗತಿಯಲ್ಲಿ ಅಸಭ್ಯವಾಗಿ ಮುಟ್ಟುವುದು ಹಾಗು ಅಶ್ಲೀಲವಾಗಿ ಮಾತನಾಡುವುದು ಈತನ ಕೆಟ್ಟ ಚಾಳಿ ಎಂದು ವಿದ್ಯಾರ್ಥಿಯರು ಆರೋಪಿಸಿದ್ದಾರೆ.

Ad Widget . Ad Widget .

ಕೋವಿಡ್ ಕಾರಣದಿಂದಾಗಿ ಪ್ರಾರಂಭವಾಗಿರುವ ಆನ್ ಲೈನ್ ಕ್ಲಾಸ್ ನಲ್ಲಿಯೂ ಈತ ತನ್ನ ಕಾರುಬಾರು ಶುರುವಿಟ್ಟುಕೊಂಡಿದ್ದನಂತೆ. ಆನ್ ಲೈನ್ ಕ್ಲಾಸ್ ವೇಳೆ ಅರೆ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದನಂತೆ. ಕೇವಲ ಬನಿಯನ್ ಹಾಕಿಕೊಂಡು ಪಾಠ ಮಾಡುತ್ತಿದ್ದನಂತೆ. ಈತನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿಯೋರ್ವಳು ತನ್ನ ಫೇಸ್ ಬುಕ್ ನಲ್ಲಿ ನೋವು ಹಂಚಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಶೋಕ ನಗರ ಪೊಲೀಸರು, ಸೊಮವಾರ ರಾತ್ರಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ತನಿಖೆಗಾಗಿ ಆತನ ಲ್ಯಾಪ್ ಟಾಪ್ ಹಾಗೂ ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿದೆ.

ಶಾಲಾ ವಿದ್ಯಾರ್ಥಿಗಳೊಂದಿಗೆ ತನ್ನ ಚಪಲ ತೀರಿಸಿಕೊಳ್ಳುವ ಕೆಟ್ಟಚಾಳಿ ಹೊಂದಿರುವ ಈ ಶಿಕ್ಷಕನಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಹಲವರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *