ಕುಂದಾಪುರ:ಆಹಾರ ಹುಡುಕಿಕೊಂಡು ಬಂದು ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯೊಂದನ್ನು ರಕ್ಷಿಸಲಾದ ಘಟನೆ ಮಂಗಳವಾರ ನಡೆದಿದೆ.
ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ ಗೆ ೫ ವರ್ಷದ ಗಂಡು ಚಿರತೆ ಮಂಗಳವಾರ ಮುಂಜಾನೆ ವೇಳೆಗೆ ಬಿದ್ದಿದೆ ಎನ್ನಲಾಗಿದ್ದು, ಮಧ್ಯಾಹ್ನ ಮನೆಯವರು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ಅರಣ್ಯಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.