Ad Widget .

ಕಾಸರಗೋಡು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಅಹಮ್ಮದ್ ದೇವರ್ ನೇಮಕ

ಕಾಸರಗೋಡು: ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಳ್‌ರವರು  ನೇಮಕರಾಗಿದ್ದಾರೆ. ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಹಿನ್ನೆಲೆ ಅಹಮ್ಮದ್ ದೇವರ್ ಅವರಿಗೆ ಕಾಸರಗೋಡು ಜಿಲ್ಲಾ ಉಸ್ತುವಾರಿ ಸ್ಥಾನ ಲಭಿಸಿದೆ.

Ad Widget . Ad Widget .

ಜಿಲ್ಲೆಯ ಸಚಿವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಹಮ್ಮದ್ ದೇವರ್ ಕೋವಿಳ್ ರವರನ್ನು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೋಜಿಕ್ಕೋಡ್ ಸೌತ್ ಕ್ಷೇತ್ರದಿಂದ ಆಯ್ಕೆಯಾದ ಎಲ್‌ಡಿಎಫ್ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐ.ಎನ್.ಎಲ್)ನ ಶಾಸಕರಾಗಿದ್ದು, ಮೊದಲ ಬಾರಿ ಐಎನ್‌ಎಲ್‌ಗೆ ಸಚಿವ ಸ್ಥಾನ ಲಭಿಸಿದೆ.
ಎರಡು ದಶಕಗಳಿಂದ ಎಲ್‌ಡಿಎಫ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಐಎನ್‌ಎಲ್ ಪಕ್ಷವನ್ನು ಎರಡು ವರ್ಷಗಳ ಹಿಂದೆ ಎಲ್‌ಡಿಎಫ್ ಘಟಕ ಪಕ್ಷವಾಗಿ ಸ್ಥಾನ ಮಾನ ನೀಡಿತ್ತು. ಮೊದಲ ಬಾರಿ ಶಾಸಕರೊಬ್ಬರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿ ಕಂಡಿದ್ದು, ಅಹಮ್ಮದ್ ರವರು ಮೊದಲ ಗೆಲುವಿನಲ್ಲೇ ಸಚಿವ ಸ್ಥಾನಕ್ಕೇರಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *