Ad Widget .

ಆಸ್ಪತ್ರೆ ಆವರಣದಲ್ಲೇ ಹೆರಿಗೆ | ಕೆಳಗೆ ಬಿದ್ದು ಶಿಶು ಮೃತ್ಯು

ಮಂಡ್ಯ: ಹೆರಿಗೆ ನೋವು ತೀವ್ರಗೊಂಡು ಗರ್ಬಿಣಿಯೊಬ್ಬರು ದಯವಿಟ್ಟು ಅಡ್ಮಿಟ್​ ಮಾಡಿಕೊಳ್ಳಿ, ನಮ್ಮನ್ನು ಬದುಕಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯೊಳಗೆ ಸೇರಿಸಿಕೊಳ್ಳದೆ, ಆಸ್ಪತ್ರೆ ಆವರಣದಲ್ಲೆ ಹೆರಿಗೆಯಾಗಿ, ನೆಲಕ್ಕೆ ಬಿದ್ದು ಮಗು ಮೃತಪಟ್ಟ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.

Ad Widget . Ad Widget .

ಇಂತಹ ಅಮಾನವೀಯ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಇಂದು ಬೆಳಿಗ್ಗೆ ಸಂಭವಿಸಿದ್ದು, ನಿನ್ನೆ ಸೋನು ಎಂಬ ಗರ್ಬಿಣಿ ಹೆರಿಗೆಗೆ ದಿನವಾದ ಕಾರಣ ಆಸ್ಪತ್ರೆಗೆ ಬಂದಿದ್ದರು. ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಮಹಿಳೆಗೆ ಇಂದು ಬೆಳಗ್ಗೆ 6 ಗಂಟೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಆಸ್ಪತ್ರೆಗೆ ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು. ಮತ್ತೆ ಹಠ ಹಿಡಿದ ಆಸ್ಪತ್ರೆ ಸಿಬ್ಬಂದಿ ಬಾಗಿಲಲ್ಲಿ 2 ಗಂಟೆ ಕಾದರೂ ಗರ್ಬಿಣಿಯನ್ನು ದಾಖಲು ಮಾಡಿಕೊಳ್ಳಲಿಲ್ಲ. ಈ ವೇಳೆ ಆಸ್ಪತ್ರೆ ಮುಂಭಾಗ ಮಹಿಳೆ ನಿಂತಿದ್ದ ವೇಳೆಯೇ ಹೆರಿಗೆಯಾಗಿದೆ. ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *