Ad Widget .

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್

ಉಜಿರೆ: ಪಿಕ್ ಅಪ್ ವಾಹನವೊಂದು ನದಿ ದಾಟಲು ನದಿಗೆ ಇಳಿಯುತ್ತಿದ್ದಂತೆ ನೀರು ಒಮ್ಮೆಲೆ ಉಕ್ಕಿ ಬಂದ ಪರಿಣಾಮ ವಾಹನ ಮುಳುಗಡೆಯಾಗಿ, ಅದರಲ್ಲಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾರ್ಮಾಡಿ ಬೆಳಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ.

Ad Widget . Ad Widget .

ಅಳದಂಗಡಿಯ ಮನೆಯೊಂದಕ್ಕೆ ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಪರಿಕರಗಳನ್ನು ಕೊಂಡೈೂದು ತಿರುಗಿ ಬರುವಾಗ, ಇಂದು ಎಡೆಬಿಡದೆ ಮಳೆಯಾದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಈ ಘಟನೆ ನಡೆದಿದೆ.

Ad Widget . Ad Widget .

ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ವಾಹನಕ್ಕೆ ಹಗ್ಗ ಕಟ್ಟಿ ನೀರು ಪಾಲಾಗದಂತೆ ತಡೆದು ಬಳಿಕ ಸ್ಥಳೀಯರೆಲ್ಲಾ ಸೇರಿ ವಾಹನವನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಕಕ್ಕಿಂಜೆಯ ವಿಕಾಯ ತಂಡ ಮತ್ತು ಮುಸ್ಲಿಮ್ ಯುವಕರ ತಂಡದ ಸದಸ್ಯರು ಪಿಕಪ್ ವಾಹನವನ್ನು ನದಿಯಿಂದ ಮೇಲೆತ್ತುವಲ್ಲಿ ಸಹಕರಿಸಿದರು

Leave a Comment

Your email address will not be published. Required fields are marked *