Ad Widget .

ಸನ್ನಿ ಲಿಯೋನ್‍ ಝಿಪ್ ಹಾಕುವಲ್ಲಿ ಸುಸ್ತಾದ ಡ್ರೆಸ್ಸಿಂಗ್ ಆರ್ಮಿ | ಇಲ್ಲಿದೆ ವೀಡಿಯೋ

ಮುಂಬೈ: ಪದೇ ಪದೇ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಿರುವ ಮಾದಕ ನಟಿ ಸನ್ನಿ ಲಿಯೋನ್ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಬೇಬಿ ಡಾಲ್ ಗೆ ಬಟ್ಟೆ ತೊಡಿಸಲು ಡ್ರೆಸ್ಸಿಂಗ್ ತಂಡವೊಂದು ಕಷ್ಟ ಪಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಬಾಲಿವುಡ್‍ನ ಜನಪ್ರಿಯ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವಾಗ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

Ad Widget . Ad Widget .

ಸೆಲೆಬ್ರಿಟಿಗಳು ಯಾವುದಾದರು ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ಅಥವಾ ಭೇಟಿ ನೀಡಿದಾಗ ಅವರ ಚಂದವನ್ನು ಇಮ್ಮಡಿಗೊಳಿಸಲು ತಂಡವೊಂದಿರುತ್ತದೆ. ಅವರು ನಟಿ-ನಟರಿಗೆ ಮೇಕಪ್, ಹೇರ್ ಸ್ಟೈಲ್, ಕಾಸ್ಟ್ಯೂಮ್ ಧರಿಸಿ ಚಂದಕಾಣುವಂತೆ ಮಾಡುತ್ತಾರೆ. ಅದರಂತೆ ತಂಡವೊಂದು ಸನ್ನಿ ಲಿಯೋನ್ ಅವರನ್ನು ಕಾರ್ಯಕ್ರಮಕ್ಕೆ ಗೌನ್ ಧರಿಸಿ ಸಿದ್ಧಗೊಳಿಸುತ್ತಿತ್ತು. ಆ ಸಮಯದಲ್ಲಿ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು ಆಗದೆ ಅವರ ಕಾಸ್ಟ್ಯೂಮ್ ತಂಡವೊಂದು ಹರಸಾಹಸಪಟ್ಟಿದೆ. ಅಂದಹಾಗೆಯೇ ತೆರೆ ಹಿಂದೆ ಸನ್ನಿ ರೆಡಿಯಾಗುತ್ತಿರುವ ದೃಶ್ಯ ಇದಾಗಿದ್ದು, ಈ ತಂಡವನ್ನು ಮಾದಕ ನಟಿ ಆರ್ಮಿ ಎಂದು ಕರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವೀಡಿಯೋಗೆ ಗೌನ್ ಸರಿಯಾಗಿ ಕಾಣಿವಂತೆ ಮಾಡಲು ಆರ್ಮಿಯೇ ಬೇಕಾಗುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಈ ವೀಡಿಯೋ ವೀಕ್ಷಿಸಿದ ಅಭಿಮಾನಿಗಳು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಕೊನೆಗೆ ಏನಾಯಿತು ಹೇಳಿ ಎಂದು ಸಖತ್ ಮಜಾವಗಿ ಕಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *