Ad Widget .

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಅಮಾನವೀಯ ಘಟನೆಗಳು |ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಮಂಗಮಾಯ…!

ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾಗೆ ತುತ್ತಾಗಿ ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತಿರುವ ಪ್ರಕರಣಗಳು ಆಗಾಗ ಕೇಳಿಬರುತ್ತಿವೆ. ಇದೀಗ ಕೊರೋನಾ ಕಾರಣದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಲಕ್ಷಾಂತರ ರೂ. ಬೆಲೆಬಾಳುವ ಮಾಂಗಲ್ಯ ಸರ ನಾಪತ್ತೆಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕುಶಾಲನಗರ ತಾಲೂಕಿನ ರಸಲ್ ಪುರ ಗ್ರಾಮದ ಕಮಲ ಎಂಬ ಮಹಿಳೆ ಮೇ 1 ರಂದು ಕೊರೋನಾ ಸೋಂಕಿಗೆ ಒಳಗಾಗಿ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮರುದಿನ ಅವರಿಗೆ ಅನಾರೋಗ್ಯ ಉಲ್ಬಣಗೊಂಡ ಕಾರಣ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಆ ವೇಳೆ ಅವರು ಕುತ್ತಿಗೆಯಲ್ಲಿದ್ದ ಸುಮಾರು 25 ಗ್ರಾಂ ತೂಕದ, ಒಂದುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ, ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿದೆ. ಈ ಬಗ್ಗೆ ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರು ತನ್ನ ಮಗನಿಗೆ ತಿಳಿಸಿದ್ದರು. ಇದಾದ ಬಳಿಕ ಮೇ 19ರಂದು ಕಮಲಾ ಅವರು ಮೃತಪಟ್ಟಿದ್ದು, ಮೇ 21ರಂದು ಆಸ್ಪತ್ರೆಗೆ ತೆರಳಿದ ಅವರ ಪುತ್ರನಿಗೆ ಆಸ್ಪತ್ರೆಯವರು ಕೇವಲ ಬ್ಯಾಗ್ ಮಾತ್ರ ನೀಡಿದ್ದಾರೆ. ಅದರಲ್ಲಿ ಸರ ಇಲ್ಲದ್ದನ್ನು ಕಂಡು ತಕ್ಷಣ ಕಮಲ ರ ಮಗ ಆಸ್ಪತ್ರೆಯ ಡೀನ್ ಮತ್ತು ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಜಿಲ್ಲಾಧಿಕಾರಿ ತಕ್ಷಣವೇ ಆಸ್ಪತ್ರೆಯ ಎಲ್ಲಾ ವಾರ್ಡಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸುವ ಭರವಸೆ ನೀಡಿದ್ದಾರೆ.

Ad Widget . Ad Widget . Ad Widget .

ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, ಕೋವಿಡ್ ನಿಂದ ಮೃತಪಟ್ಟ ಮಹಿಳೆ ಮೊಬೈಲ್ ಫೋನ್ ಇದೇ ರೀತಿ ಕಾಣೆಯಾಗಿತ್ತು. ಆ ಮಹಿಳೆಯ ಪುಟ್ಟ ಮಗಳು, ನನ್ನ ಮತ್ತು ಅಮ್ಮನ ನೆನಪುಗಳಿರುವ ಮೊಬೈಲ್ ಹುಡುಕಿಕೊಡುವಂತೆ ಅಂಗಲಾಚುವ ಮನವಿ ಪತ್ರ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Leave a Comment

Your email address will not be published. Required fields are marked *