ಸಿದ್ದಾಪುರು: ವಿಶ್ವದಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿರುವಾಗ, ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಸಮಾಜಮುಖಿ ಕೆಲಸ ಮಾಡಬೇಕಾದ ಪತ್ರಕರ್ತರೋರ್ವರು, ಸಾರ್ವಜನಿಕರಿಗೆ ಅಕ್ರಮವಾಗಿ ನಕಲಿ ಕೋವಿಡ್ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೊರೋನಾ ನೆಗೆಟೀವ್ ರಿಪೋರ್ಟ್ ಕಡ್ಡಾಯವಾಗಿದ್ದು, ಸಿದ್ಧಾಪುರದ ವಿಜಯವಾಣಿ ಪತ್ರಿಕೆಯ ವರದಿಗಾರ ಅಬ್ದುಲ್ ಅಜೀಜ್ ಎಂಬಾತ ಕೇರಳಕ್ಕೆ ಹೋಗುವವರಿಗೆ ತನ್ನ ಸ್ಟುಡಿಯೋದಲ್ಲಿಯೇ ಕೂತು ಯಾವುದೇ ಟೆಸ್ಟ್ ಮಾಡಿಸದೇ, ನೆಗಟೀವ್ ರಿಪೋರ್ಟ್ ಕೊಟ್ಟು ಹಣಪಡೆದು ಸಿಕ್ಕಿಬಿದ್ದಿದ್ದಾನೆ.
ಆತನ ಈ ಕೃತ್ಯಕ್ಕೆ ಇಡೀ ಪತ್ರಿಕಾ ವಲಯ ತಲೆ ತಗ್ಗಿಸುವಂತಾಗಿದ್ದು, ಸಿದ್ಧಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ವಶಕ್ಕೆ ನೀಡಿದ್ದಾರೆ.
ಸರಕಾರ, ಪೋಲಿಸರು ಸೇರಿದಂತೆ ವಿವಿಧ ಇಲಾಖೆಗಳು ಕೊರೋನಾ ನಿಗ್ರಹಕ್ಕೆ ಹರಸಾಹಸ ಪಡುತ್ತಿರುವ ಈ ಸಮಯದಲ್ಲಿ ಸರಕಾರದ ವಿರುದ್ಧದ ಕೆಲಸ ಮಾಡಿರು ಈತನ ಯಾವುದೇ ಟೆಸ್ಟ್ ಮಾಡದೇ ತನ್ನ ಸ್ಟುಡಿಯೋದಲ್ಲಿ ಕೂತು ನೆಗಟೀವ್ ಸರ್ಟಿಫಿಕೇಟ್ ಕೊಡುತ್ತಿದ್ದಿದ್ದರಿಂದ ಎಷ್ಟು ಜನರಿಗೆ ಸೋಂಕು ಹರಡಿರಬಹುದೆಂದು ಪ್ರಶ್ನಿಸಿರುವ ಸಾರ್ವಜನಿಕರು ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದ್ದಾರೆ.