Ad Widget .

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್!

ಮಡಿಕೇರಿ: ಪುಟ್ಟ ಬಾಲಕಿಯೊಬ್ಬಳು ಕೋವಿಡ್ ನಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದು ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್‌ ಪೋನ್‌‌‌ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ಇದು ವೈರಲ್ ಆಗಿದ್ದು, ಎಲ್ಲರ ಮನ ಮಿಡಿದಿತ್ತು. ಇದೀಗ ಕೊರೊನಾ ಕೇಂದ್ರದಿಂದ ಮೊಬೈಲ್ ಎಗರಿಸುತ್ತಿದ್ದಂತ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Ad Widget . Ad Widget .

ಮಡಿಕೇರಿಯ ಕೊರೋನಾ ಆಸ್ಪತ್ರೆಯಲ್ಲಿ ಅನೇಕರ ಮೊಬೈಲ್ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು. ಅದರಲ್ಲಿಯೂ ಬಾಲಕಿ ಹೃತೀಕ್ಷಾ ಮನವಿಯ ಸುದ್ದಿಯಂತೂ ವೈರಲ್ ಆಗಿತ್ತು.

Ad Widget . Ad Widget .

ಇದಾದ ಬಳಿಕ ಸೋಮವಾರಪೇಟೆಯ ಬಿಜೆಪಿಯ ಉಷಾ ತೇಜಸ್ವಿ ಅವರ ಮೊಬೈಲ್ ಕೂಡ ಮೇ 4ರಂದು ಕಳವಾಗಿತ್ತು. ಈ ಪ್ರಕರಣ ಬಳಿಕ ತನಿಖೆ ಚುರುಕುಗೊಳಿಸಿದಂತ ಪೊಲೀಸರು ಬಿಜೆಪಿ ನಾಯಕಿಯ ಮೊಬೈಲ್ ಇಎಂಐ ಟ್ರಾಕ್ ನಲ್ಲಿಟ್ಟಿದ್ದರು.
ಇಂತಹ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಂತ ಆರೋಪಿ ಸುಮಂತ್ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಈತ ಈಗಾಗಲೇ ಹಲವು ಮೊಬೈಲ್ ಕದ್ದು, ಬೇರೆಯವರಿಗೆ ಮಾರಾಟ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ.

Leave a Comment

Your email address will not be published. Required fields are marked *