ನವದೆಹಲಿ.ಮೇ.25: ಮಾರಣಾಂತಿಕ ಕೊರೋನಾ ವೈರಸ್ ಭವಿಷ್ಯದಲ್ಲಿ ರೂಪಾಂತರಗೊಳ್ಳಬಹುದು, ಮಕ್ಕಳಿಗೆ ಹೆಚ್ಚು ಅಪಾಯವನ್ನುಂಟು ಮಾಡಬಹುದು ಎಂಬ ಆತಂಕದ ನಡುವೆ ಮುಖ್ಯವಾದ ಮಾಹಿತಿ ಸಿಕ್ಕಿದೆ.
ಕೋವಿಡ್ 19 ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ಯಾವುದೇ ಸೂಚನೆ ಇಲ್ಲವೆಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ತಜ್ಞರ ಪ್ರಕಾರ, ಕೊರೋನಾ ಮೊದಲ ಅಲೆ ವೃದ್ಧರ ಮೇಲೆ ಆಕ್ರಮಣ ಮಾಡಿದ್ದು, ಎರಡನೇ ಅಲೆಯಲ್ಲಿ ಯುವಕರ ಮೇಲೆ ಪರಿಣಾಮ ಬೀರಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯಕಾರಿಯಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿತ್ತು.
ಆದರೆ, ಪಿಡಿಯಾಟ್ರಿಕ್ಸ್ ಅಸೋಸಿಯೇಷನ್ ಇದು ಸತ್ಯ ಆಧರಿಸಿಲ್ಲ ಎಂದು ಹೇಳಿದೆ. ಮೂರನೇ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ.
ಯಾರು ಭಯ ಪಡಬಾರದು ಎಂದು ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಕಳೆದ ವಾರ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ. ಪೌಲ್ ಅವರು, ಮಕ್ಕಳ ಮೇಲೆ ಕೋವಿಡ್-19 ಪರಿಣಾಮ ಬೀರಬಹುದು ಎಂದು ನೀಡಿದ ಹೇಳಿಕೆಗೆ ಇದು ವಿರುದ್ಧವಾಗಿದೆ. ಮಕ್ಕಳಿಗೆ ಕೊರೋನಾ ಹರಡಬಹುದು ಅವರು ಸೌಮ್ಯವಾದ ಸೋಂಕಿನ ಲಕ್ಷಣ ಹೊಂದಿರುತ್ತಾರೆ. ಮಕ್ಕಳಲ್ಲಿ ಮರಣ ಪ್ರಮಾಣ ತುಂಬಾ ಕಡಿಮೆ ಎನ್ನಲಾಗಿತ್ತಾದರೂ, ಕೋವಿಡ್ 19 ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ಯಾವುದೇ ಸೂಚನೆ ಇಲ್ಲವೆಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.