Ad Widget .

ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…! ತನಿಖಾಧಿಕಾರಿಗಳ ಮುಂದೆ ರಮೇಶ್ ಹೇಳಿದ್ದೇನು….?

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ, ಯುವತಿ ಜೊತೆ ರಾಸಲೀಲೆ ಆಡುತ್ತಿದ್ದ ವಿಡಿಯೋ ಒಂದು ಮೂರು ತಿಂಗಳ ಹಿಂದೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಆ ಸಿಡಿ ಪ್ರಕರಣಕ್ಕೆ ಬಹುದೊಡ್ಡ ತಿರುವು ದೊರೆತಿದ್ದು, ಆ ವಿಡಿಯೋದಲ್ಲಿ ಯುವತಿ  ಜೊತೆ ಚಕ್ಕಂದವಾಡುತ್ತಿರುವುದು ನಾನೇ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget .

ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊದಲಿಗೆ, ಅದು ನಾನಲ್ಲ. ಯಾರೋ ವೈರಿಗಳು ಯಾವುದೋ ವಿಡಿಯೋಗೆ ನನ್ನನ್ನು ಎಡಿಟ್ ಮಾಡಿದ್ದಾರೆ ಎಂದಿದ್ದ ಜಾರಕಿಹೊಳಿಯನ್ನು ತನಿಖಾಧಿಕಾರಿಗಳು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದರು. ಇದೀಗ, ಆ ವಿಡಿಯೋದಲ್ಲಿ ಇರೋದು ನಾನೇ. ನನಗೆ ಯಾವುದೋ ಪ್ರಾಜೆಕ್ಟಿಗೆ ಸಂಬಂಧಿಸಿದಂತೆ ಆಕೆಯೇ ಪರಿಚಯವಾಗಿತ್ತು. ಯುವತಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಆಕೆ ಜೊತೆ ಸರಸವಾಡಿಲ್ಲ. ಅವಳನ್ನು ನಾನು ಅತ್ಯಾಚಾರ ಮಾಡಿಲ್ಲ. ಆಕೆಯ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಗೊತ್ತಿಲ್ಲದೆ ಯಾರು ವಿಡಿಯೋ ತೆಗೆದು ಹರಿಯಬಿಟ್ಟಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

Ad Widget . Ad Widget .

ಅಂತೂ ಇಂತೂ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಸಚಿವರ ಕರ್ಮಕಾಂಡದ ಪ್ರಕರಣ ಅಂತ್ಯ ಕಾಣುವ ಹಂತ ತಲುಪಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ್ಯಾರನ್ನು ಜೈಲಿಗಟ್ಟಲಿದ್ದಾರೆ ಎಂದು ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *