Ad Widget .

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಹಿಂಬದಿ ಸವಾರನ ಜೀವ ತೆಗೆದ ಸವಾರ, ಚೆಕ್ ಪೋಸ್ಟ್ ಗೇಟ್ ಗೆ ಬೈಕ್ ಗುದ್ದಿದ ವೀಡಿಯೋ ವೈರಲ್

ತೆಲಂಗಾಣ: ಅಸಾದ್ಯ ರೀತಿಯಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸುವ ಸಾಹಸ ಮಾಡಲು ಹೋಗಿ ಹಿಂಬದಿ ಸವಾರನ ಸಾವಿಗೆ ಬೈಕ್ ಸವಾರನೇ ಕಾರಣನಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.

Ad Widget . Ad Widget .

ಮಂಚೇರಿಯಲ್ ಜಿಲ್ಲೆಯ ತಪುರ್ ಚೆಕ್ ಪೋಸ್ಟ್ ನಲ್ಲಿ ಘಟನೆಯು ಮೇ 22 ರ ಮಧ್ಯಾಹ್ನ 12.53 ರ ವೇಳೆಗೆ ನಡೆದಿದ್ದು , ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಸೆರೆಯಾಗಿರುವ ವೀಡಿಯೋದಲ್ಲಿ ಯುವಕರಿಬ್ಬರು ಅತಿ ವೇಗವಾಗಿ ಬಂದಿದ್ದು, ಈ ಸಂದರ್ಭ ಚೆಕ್ ಪೋಸ್ಟ್ ಬಳಿ ಪಹರೆಯಲ್ಲಿದ್ದ ಅರಣ್ಯ ಸಿಬ್ಬಂದಿ ಬೈಕ್ ಸವಾರನಿಗೆ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಅತಿ ವೇಗದಲ್ಲಿದ್ದ ಸವಾರ ಮುನ್ನುಗ್ಗಿ ಬರುತ್ತಿದ್ದದ್ದನ್ನು ಕಂಡ ಅರಣ್ಯ ಸಿಬ್ಬಂದಿ ತಕ್ಷಣವೇ ಗೇಟ್ ಅನ್ನು ತೆರೆಯಲು ಮುಂದಾಗಿದ್ದರೂ , ಬೈಕ್ ಸವಾರ ಗೇಟ್ ನಡಿಯಲ್ಲಿ ನುಸುಳಿಕೊಂಡು ಮುಂದೆ ಸಾಗಿದ್ದಾನೆ . ಆದರೆ ಹಿಂಬದಿ ಸವಾರನ ತಲೆ ವೆಕ್ ಪೋಸ್ಟ್ ನ ಕಬ್ಬಿಣದ ಗೇಟ್ ಗೆ ಬಲವಾಗಿ ಬಡಿದಿದ್ದು ರಸ್ತೆ ಮೇಲೆ ಎಸೆಯಲ್ಪಟ್ಟಿದ್ದಾನೆ . ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಆರಂಭದಲ್ಲಿ ಇದು ಅರಣ್ಯ ಇಲಾಖೆ ಸಿಬ್ಬಂದಿಗಳ ತಪ್ಪಿನಿಂದ ನಡೆದ ಅಪಘಾತ ಎಂದು ಗ್ರಾಮಸ್ಥರು ಭಾವಿಸಿಕೊಂಡಿದ್ದರು . ಆದರೆ ಸಿಸಿಟಿವಿ ವೀಡಿಯೋ ಅಪಘಾತದ ಅಸಲಿಯತ್ತು ಮುಂದಿಟ್ಟಿದ್ದು , ನಿರ್ಲಕ್ಷ್ಯತನದ ಹಾಗೂ ಬೇಜವಾಬ್ದಾರಿಯಿಂದ ಕೂಡಿದ ಬೈಕ್ ಚಾಲನೆಗೆ ಸವಾರನ ಮೇಲೆ ಐಪಿಸಿ 304 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ . ಅಲ್ಲದೇ , ಅಪಘಾತ ಸಮಯದಲ್ಲಿ ಬೈಕ್ ಸವಾರ ಅತಿಯಾದ ಮದ್ಯ ಸೇವಿಸಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ . ಮೃತ ಸಹಸವಾರನನ್ನ ವೆಂಕಟೇಶ್ ಗೌಡ್ ( 30 ) ಎಂದು ಗುರುತಿಸಲಾಗಿದೆ . ಬೈಕ್ ಚಲಾಯಿಸುತ್ತಿದ್ದ ಚಂದ್ರಶೇಖರ್ ನನ್ನು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾಗಿ ತಿಳಿದು ಬಂದಿದೆ .

ಅಪಘಾತದ ಭೀಕರತೆಯ ವೀಡಿಯೋ: https://youtu.be/rbjJfvP0Lyc

Leave a Comment

Your email address will not be published. Required fields are marked *