ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ

ಮುಲ್ಕಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೇಲ್ ಪರ ಬರಹಗಳಿದ್ದ ಪೋಸ್ಟರ್ ಹಂಚಿಕೊಂಡ ಯುವಕನಿಗೆ ಪ್ಯಾಲೆಸ್ತೀನ್ ಪರವಾದಿ ಯುವಕರ ತಂಡ ಬೆದರಿಕೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ಕಾರ್ನಾಡ್ ಎಂಬಲ್ಲಿ ನಡೆದಿದೆ.

Ad Widget ... ..

ಕಾರ್ನಾಡ್ ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಯುವಕ ಇಸ್ರೇಲ್ ಪರ ಘೋಷಣೆಗಳಿದ್ದ ಪೋಸ್ಟರ್ ಹಂಚಿಕೊಂಡ ಕಾರಣಕ್ಕಾಗಿ ಕೆಲ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ನಂತರ ಹಿಂದೂ ಸಂಘಟನೆಗಳ ಮುಖಂಡರು ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಬೆದರಿಕೆಯೊಡ್ಡಿದ ಯುವಕರನ್ನು ಬಂಧಿಸಿ ಬುದ್ಧಿವಾದ ತಿಳಿಸಿ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *