Ad Widget .

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್

ಕಾಸರಗೋಡು.ಮೇ.24: ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಯುವಕರು ಜಾಲಿಗಾಗಿ ಟಿಕ್ಕಾ ಪಾರ್ಟಿ ಮಾಡಿದರು, ಆದರೆ ಅಲ್ಲಿಗೆ ಖಾಕಿ ಪಡೆ ಲಗ್ಗೆ ಇಟ್ಟಾಗ ಯುವಕರು ಟಿಕ್ಕಾ ಬಿಟ್ಟು ಓಡಿದ್ದಾರೆ. ಇಂಥ ವಿಲಕ್ಷಣ ಪ್ರಕರಣವೊಂದು ಗಡಿಭಾಗ ಕಾಸರಗೋಡಿನಲ್ಲಿ ಮೇ.23 ರಂದು ನಡೆದಿದೆ.

Ad Widget . Ad Widget .

ಒಂದೆಡೆ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಯುವಕರು ಭಾನುವಾರದಂದು ವೀಕ್ ಎಂಡ್ ಪಾರ್ಟಿ ಮಾಡಲು ಪ್ಲಾನ್ ರೂಪಿಸಿ ಜಾಗ ಸೆಟ್ ಮಾಡಿದರು. ಅದರಂತೆ ನಿಗದಿತ ಸಮಯಕ್ಕೆ ಅಲ್ಲಿ ಸೇರಿ ಟಿಕ್ಕಾ ಮಾಡಲು ಶುರುವಿಟ್ಟರು. ಇನ್ನೇನು ಟಿಕ್ಕಾ ರೆಡಿ ಆಗಿ ಪಾರ್ಟಿಗೆ ಇನ್ನಷ್ಟು ಕಿಕ್ ಕೊಡಬೇಕು ಎನ್ನುವಷ್ಟರಲ್ಲಿ ಅದ್ಹೇಗೋ ಪೊಲೀಸ್ ಇಲಾಖೆಗೆ ಮಾಹಿತಿ ತಲುಪಿತ್ತು.

Ad Widget . Ad Widget .

ಖಾಕಿ ಕೈಗೆ ಸಿಕ್ಕಿಬಿದ್ದರೆ ಕೇಸ್ ಇಲ್ಲವೇ ಒದೆ ಎನ್ನುವುದು ಯುವಕರಿಗೆ ತಿಳಿದಿತ್ತು. ಖಾಕಿ ಕಂಡೊಡನೆ ಎದ್ದುಬಿದ್ದು ಓಡಿದರು. ಈ ಸಂದರ್ಭ ಟಿಕ್ಕ ಅಲ್ಲಿಯೇ ಬಾಕಿಯಾಯಿತು. ಯುವಕರ ಬೈಕ್ ಗಳೂ ಬಾಕಿಯಾದವು. ಠಾಣೆಯಿಂದ ವಾಹನ ತರಿಸಿ ಯುವಕರು ಬಿಟ್ಟು ಹೋಗಿದ್ದ ಬೈಕ್‌ಗಳನ್ನು ಗಾಡಿಯಲ್ಲಿ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ಟಿಕ್ಕಾ ತಿಂದವರಾರು ಎಂದು ತಿಳಿದುಬಂದಿಲ್ಲ.

ವಿಡಿಯೋ ಲಿಂಕ್ : https://youtube.com/shorts/SiYjYU9QP8g?feature=share

Leave a Comment

Your email address will not be published. Required fields are marked *