ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ!

ತೆಲಂಗಾಣ: ಈ ಹಿಂದೆ ಕೋಲಾರದ ಉಮಾಪತಿ ಎಂಬ ಯುವಕ ಅಕ್ಕತಂಗಿಯರನ್ನು ವರಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಬಳಿಕ ಕಂಬಿ ಸೇರಿದ್ದ ಘಟನೆ ಮರೆಯುವಾಗಲೇ ಇಂತದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ವಧುಗಳಿಬ್ಬರೂ ಒಡಹುಟ್ಟಿದವರು!

Ad Widget ... ..

ತೆಲಂಗಾಣ ರಾಜ್ಯದ ಮೆದಕ್​ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮದುವೆ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ.

Ad Widget

ಅಕ್ಕ ಸ್ವಾತಿಗೆ ಸಂಬಂಧಿಕರ ಹುಡುಗ ಬಾಲರಾಜು ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ತಂಗಿ ಶ್ವೇತಾ ಮಾನಸಿಕ ಅಸ್ವಸ್ಥಳಾಗಿದ್ದಳು. ಹಾಗಾಗಿ ಅಕ್ಕ-ತಂಗಿ ಇಬ್ಬರನ್ನೂ ಮದುವೆ ಆಗುವಂತೆ ಶ್ವೇತಾ ಹೇಳಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಬಾಲರಾಜು ಏಕಕಾಲಕ್ಕೆ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ.

Leave a Comment

Your email address will not be published. Required fields are marked *