Ad Widget .

ಅಚ್ಚ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಕೆ.ಎಮ್. ಅಶ್ರಫ್

ತಿರುವನಂತಪುರಂ: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆದು ಈ ತಿಂಗಳಾರಂಭದಲ್ಲಿ ಫಲಿತಾಂಶ ಹೊರ ಬಿದ್ದಿತ್ತು. ಒಟ್ಟು 140 ಸ್ಥಾನಗಳಿರುವ ಕೇರಳ ವಿಧಾನಸಭೆ ಶಾಸಕರಾಗಿ ಆಯ್ಕೆಯಾದವರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ತಿರುವನಂತಪುರಂ ನಲ್ಲಿ ನಡೆದಿದೆ. ಈ ವೇಳೆ ಮಂಜೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕೆ ಎಂ ಅಶ್ರಫ್ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಅಭಿಮಾನ ಮೆರೆದಿದ್ದಾರೆ.

Ad Widget . Ad Widget .

ಅಶ್ರಫ್ ಅವರು ತನ್ನ ಸಂಪೂರ್ಣ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಪಡೆದಿದ್ದು, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಭೌಗೋಳಿಕವಾಗಿ ಕೇರಳದಲ್ಲಿ ಇದ್ದರು ಈಗಿನ ಕಾಸರಗೋಡು ಜಿಲ್ಲೆ ಹಿಂದೆ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಕಾಸರಗೋಡಿನ ಶೇಕಡ 90ಕ್ಕೂ ಹೆಚ್ಚು ಜನರು ಇಂದಿಗೂ ಕನ್ನಡ ಮತ್ತು ತುಳು ಭಾಷೆ ಮಾತನಾಡುವವರಾಗಿದ್ದಾರೆ. ಶಾಲಾ ದಿನಗಳಲ್ಲಿ ರಾಜಕೀಯ ಅಭಿರುಚಿ ಉಳ್ಳವರಾಗಿದ್ದ ಅಶ್ರಫ್, ಸ್ನಾತಕೋತ್ತರ ಪದವಿ ಪಡೆದ ನಂತರ ಸ್ಥಳೀಯವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ತುಳುನಾಡಿಗೆ ಹೊಂದಿಕೊಂಡಿರುವ ಮಂಜೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಅಚ್ಚಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಕ್ಷೇತ್ರದ ಜನತೆಯಲ್ಲಿ ಅಭಿವೃದ್ಧಿಯ ಭರವಸೆ ಹುಟ್ಟಿಸಿದೆ.

Ad Widget . Ad Widget .

ಕಾಸರಗೋಡು ಜಿಲ್ಲೆಯ ಬಹುಸಂಖ್ಯಾತ ಕನ್ನಡಿಗರ ಪ್ರತಿನಿಧಿಯಾಗಿ ಕೇರಳ ವಿಧಾನಸಭೆ ಪ್ರವೇಶಿಸಿರುವ ಅಶ್ರಫ್ ಕ್ರೀಡಾ ಕ್ಷೇತ್ರದಲ್ಲಿ ಅತಿ ಆಸಕ್ತಿ ಹೊಂದಿದ್ದಾರೆ ಮತ್ತು ಉತ್ತಮ ಯುವ ಸಂಘಟಕರು ಆಗಿದ್ದಾರೆ.

Leave a Comment

Your email address will not be published. Required fields are marked *