ಸುಳ್ಯ: ಕೊರೊನಾ ಮಾರ್ಗ ಸೂಚಿ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಜೂಜಾಟ ಆಡುತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸೇರಿದಂತೆ 10 ಮಂದಿಯನ್ನು ಸುಳ್ಯ ಪೊಲೀಸ್ ಬಂಧಿಸಿದ ಘಟನೆ ನೆಡೆದಿದೆ.
ಮಾಜಿ ಜಿ.ಪಂ.ಸದಸ್ಯ, ಬಿ.ಜೆ.ಪಿ ಕಾರ್ಯಕರ್ತ ಗಂಗಾಧರ ಕೇಪಳಕಜೆ ಸಹಿತ, ಗೋಪಾಲಕೃಷ್ಣ, ಗಂಗಾಧರ
ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್ , ಮೋಹನ್ ದಾಸ್, ಅಶೋಕ, ದಯಾನಂದ ಬಂಧಿತ ಆರೋಪಿಗಳು. ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತು ನಿರತ ಸುಳ್ಯ ಠಾಣಾ ಎಸ್ ಐ ರತ್ನಕುಮಾರ್ ಹಾಗೂ ಸಿಬ್ಬಂದಿ ಇವರನ್ನು ಗಮನಿಸಿ ವಿಚಾರಿಸದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಆರೋಪಿಗಳನ್ನು ಬಂಧಿಸಿ ಕೋವಿಡ್ ನಿಯಮ ಉಲ್ಲಂಘನೆ Sec: 269, & Sec: 5(4) The karnataka Epidemic Diseases Act 2020, & Sec: 87 KP Act ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳಿಂದ ರೂ.1,890 ನಗದು, ಇಸ್ಪೀಟ್ ಕಾರ್ಡುಗಳು ಹಾಗು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.