Ad Widget .

ಎಂಆರ್ ಪಿಎಲ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ನಮ್ಮವರಿಗೆ “ಗೊತ್ತಾನಗ ಪೊರ್ತಾಂಡ್”

ಮಂಗಳೂರು. ಮೇ.23: ಇಲ್ಲಿನ ಎಂಆರ್ ಪಿಎಲ್ ನಲ್ಲಿ ನಡೆದ ನೇಮಕಾತಿಯಲ್ಲಿ ಕರ್ನಾಟಕದ ‌ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ  ಅನ್ಯಾಯವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ‌ಸಂಸದ ನಳಿನ್ ಕುಮಾರ್‌ ಕಟೀಲು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕರು‌ ಎಂಆರ್ ಪಿಎಲ್ ನ ಆಡಳಿತ ಮಂಡಳಿಯ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಹಾಸ್ಯಕ್ಕೆ ಒಳಗಾಗಿದೆ.

Ad Widget . Ad Widget .

ನೇಮಕಾತಿಯಲ್ಲಿ ಇಬ್ಬರು ಕನ್ನಡಿಗರನ್ನು‌ ಮಾತ್ರ ಆಯ್ಕೆ ಮಾಡಲಾಗಿದ್ದು, ಈ ಕುರಿತು ಜನಪ್ರತಿನಿಧಿಗಳ ಮತ್ತು ಎಂಆರ್ ಪಿಎಲ್ ವಿರುದ್ದ ಜಾಲತಾಣಗಳಲ್ಲಿ ಹಲವು ಮಂದಿ ಆಕ್ರೋಶ ಕೇಳಿಬಂದಿತ್ತು. ಘಟಕ ಸ್ಥಾಪನೆ ಮಂಗಳೂರಿನಲ್ಲಿದ್ದರೂ ಉದ್ಯೋಗಕ್ಕೆ ಕನ್ನಡಿಗರೇತರರನ್ನು ಆಯ್ಕೆ ಮಾಡಿರುವುದಕ್ಕೆ ಜಿಲ್ಲೆಯ ಸಂಸದ, ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಕೊನೆಗೂ ಎಚ್ಚೆತ್ತ ನಾಯಕರು ಕಂಪೆನಿಯ ಆಡಳಿತ ‌ಮಂಡಳಿಯ ಜೊತೆಗೆ ಸಭೆ ನಡೆಸಿ, ಸದರಿ ನೇಮಕಾತಿಯನ್ನು ತಡೆಹಿಡಿಯಲು ಆದೇಶಿಸಿದ್ದಾರೆ. ಈ ಘಟನೆ ನಮ್ಮ ನಾಯಕರಿಗೆ ‘ಗೊತ್ತಾನಗ ಪೊರ್ತಾಂಡ್’ ಎಂಬಂತಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *