Ad Widget .

“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್

ಕುಶಾಲನಗರ: ವಿಶ್ವದಾದ್ಯಂತ  ಕಳೆದೊಂದು ವರ್ಷಗಳಲ್ಲಿ ಕೊರೋನಾ ಹಲವಾರು ಕರುಣಾಜನಕ ವ್ಯಥೆಗಳನ್ನು ಸೃಷ್ಟಿಸಿದೆ. ಕೊರೊನಾದಿಂದಾಗಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರ ಕಳೇಬರವನ್ನೂ ನೋಡಲಾಗದೆ ಜನ ದುಖಃದ ಕಡಲಲ್ಲಿ ತೇಲುತ್ತಿರುವ ಅದೆಷ್ಟೋ ಸನ್ನಿವೇಶಗಳಿಗೆ ನಾವು ನಿತ್ಯ ಸಾಕ್ಷಿಯಾಗುತ್ತಿದ್ದೇವೆ.

Ad Widget . Ad Widget .

ಅಂದರಂತೆ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿಯೊಬ್ಬಳು ಅಮ್ಮನ ಜೊತೆ ತಾನು ಕಳೆದ ದಿನಗಳ ನೆನಪು ಹೊತ್ತ ಮೊಬೈಲ್​ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಈ ಕಥೆ ನಿಜಕ್ಕೂ ಕರುಣಾಜನಕವಾಗಿದೆ. ಕೊವಿಡ್ ತುತ್ತಾಗಿ ಜೀವ ತೆತ್ತ ಪ್ರೀತಿಯ ತಾಯಿ ಆಸ್ಪತ್ರೆಯಿಂದ ಮರಳಿ ಮನೆಗೆ ಬರಲೇ ಇಲ್ಲ. ಅಮ್ಮನಂತು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅಮ್ಮನ ಜೊತೆ ಕಳೆ ನೆನಪಿನ ಮಧುರ ಕ್ಷಣಗಳ ಫೋಟೋಗಳನ್ನು ಹೊತ್ತುಕೊಂಡಿದ್ದ ಮೊಬೈಲ್ ನನಗೀಗ ಬೇಕು ಎಂದು ಪುಟ್ಟ ಬಾಲಕಿ ಪತ್ರವೊಂದನ್ನು ಬರೆದಿದ್ದಾಳೆ.

Ad Widget . Ad Widget .

ಕೊಡಗು ಜಿಲ್ಲೆಯ ಕುಶಾಲನಗರ, ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಬಾಕಿ  ತನ್ನ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಆಸ್ಪತ್ರೆಯಲ್ಲಿ  ಕಳೆದುಹೋಗಿದೆ. ಸಿಕ್ಕಿದವರು ಅದನ್ನು ತನಗೆ ಹಿಂದಿರುಗಿಸುವಂತೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ಮೊಬೈಲ್ ಹುಡುಕಿಕೊಡುವಂತೆ ಪತ್ರ ಬರೆದು ರೋಧಿಸುತ್ತಿದ್ದಾಳೆ.

ನಮ್ಮ ಕುಟುಂಬಕ್ಕೆ  ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್​ನಲ್ಲಿ ಗುಣಮುಖರಾಗಿದ್ದೇವೆ. ತಾಯಿಗೆ ಕೊರೊನಾ ಉಲ್ಬಣಗೊಂಡು ಮೇ 6ರಂದು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಮೃತಪಟ್ಟಿದ್ದಾರೆ ಎಂದು ನೊಂದ ಹುಡುಗಿ ಹೃತಿಕ್ಷ ಅಳಲು ತೋಡಿಕೊಂಡಿದ್ದಾಳೆ.

ಈಗಷ್ಟೇ ಅಮ್ಮ ಇನ್ನಿಲ್ಲ ಎನ್ನುವ ನೋವನ್ನು ನುಂಗುತ್ತಿದ್ದೇನೆ. ಆದರೆ ಮನೆಯಲ್ಲಿ ಅಮ್ಮನೊಂದಿಗೆ ಇದ್ದ ಪ್ರತಿ ಕ್ಷಣವು ನೆನಪಿಗೆ ಬರುತ್ತಿದೆ. ಅದರಲ್ಲೂ ಲಾಕ್​ಡೌನ್ ಸಂದರ್ಭದಲ್ಲಿ ಅಮ್ಮನೇ ನನಗೆ ಎಲ್ಲಾ. ಆನ್​ಲೈನ್​ ಕ್ಲಾಸ್​ ಆಗುವಾಗ ಅಮ್ಮ ಸಹಾಯ ಮಾಡುತ್ತಿದ್ದರು. ಮನೆಯಲ್ಲಿ ಅಮ್ಮನೊಂದಿಗೆ ಆಡುತ್ತಿದ್ದ ಆಟಗಳು ನನ್ನನ್ನು ಕಾಡುತ್ತಿದೆ. ಕಳೆದ ಪ್ರತಿಯೊಂದು ಸನ್ನಿವೇಶವು ಅಮ್ಮನ ಕೈಯಲ್ಲಿ ಇದ್ದ ಮೊಬೈಲ್​ನಲ್ಲಿದೆ. ಹೀಗಾಗಿ ಆ ಮೊಬೈಲ್ ​ನನಗೆ ಬೇಕು ಎಂದು ಹೃತಿಕ್ಷ ಮನವಿ ಮಾಡಿದ್ದಾಳೆ.

ತಾಯಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರಕ್ಕೆ ಅವಸರವಿತ್ತು. ಹೀಗಾಗಿ ವಿಷಯ ತಿಳಿದು ನಮ್ಮ ತಂದೆ ಆಸ್ಪತ್ರೆಗೆ ತೆರಳಿದ್ದಾರೆ. ತಾಯಿಯ ಮೃತದೇಹವನ್ನು ಆಸ್ಪತ್ರೆಯವರು ಹಸ್ತಾಂತರಿಸಿದ್ದು, ಆಸ್ಪತ್ರೆಯಲ್ಲಿ ಇದ್ದ ಅಮ್ಮನ ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿಗಳು ತಂದೆ ಕೈಗೆ ಇಟ್ಟಿದ್ದಾರೆ. ಆದರೆ ತಾಯಿ ಜೊತೆಗಿದ್ದ ಮೊಬೈಲ್ ಕಾಣಿಸುತ್ತಿಲ್ಲ. ಆಸ್ಪತ್ರೆಯವರ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಕಣ್ಣೀರಾಗಿದ್ದಾಳೆ.

ನನ್ನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಕೊರೊನಾ ಕಾಲದಲ್ಲಿ ಓದಲು ಉಪಯೋಗವಾಗಲಿ ಎಂದು ಮೊಬೈಲ್ ಕೊಡಿಸಿದ್ದರು. ಇದರಲ್ಲಿ ನನಗೆ ಆನ್​ಲೈನ್ ಕ್ಲಾಸ್ ಕೂಡ ನಡೆಯುತ್ತಿತ್ತು. ತಾಯಿಗೆ ಹುಷಾರಿಲ್ಲದ ಕಾರಣ ಇದು ಅವರ ಬಳಿ ಇತ್ತು. ಅಮ್ಮನ ಬಳಿ ಶುಕ್ರವಾರ ಸಂಜೆ ಮಾತನಾಡಿದ್ದೆ. ಆದರೆ ಶನಿವಾರ ಬೆಳಿಗ್ಗೆ ರಿಂಗ್ ಆದ ಫೋನ್ ಮಧ್ಯಾಹ್ನ ಸ್ವಿಚ್​ ಆಫ್ ಆಗಿದೆ. ಹೀಗಾಗಿ ನನ್ನ ತಾಯಿಯ ಮೊಬೈಲ್ ಹುಡುಕಿ ಕೋಡಿ ಎಂದು 5ನೇ ತರಗತಿ ಓದುತ್ತಿರುವ ಹೃತಿಕ್ಷ ಬೇಡಿಕೊಂಡಿದ್ದಾಳೆ.

Leave a Comment

Your email address will not be published. Required fields are marked *