Ad Widget .

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ..

ಹಾಸನ.ಮೇ23: ಎರಡು ವಾರದ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಒಬ್ಬನ ತಲೆಯನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯ ನಿವಾಸಿ ಭರತ್ ಎಂಬುವನೇ ಕೊಲೆಯಾದ ಯುವಕ.

Ad Widget . Ad Widget .

ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮಚ್ಚಿನಿಂದ ಕೊಚ್ಚಿರುವ ಹಂತಕರು ತಲೆಯನ್ನು ಎರಡು ಹೋಳು ಮಾಡಿದ್ದಾರೆ ಎನ್ನಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೂರ್ವದ್ವೇಷದಿಂದಲೇ‌ ಈ ಕೃತ್ಯ ನಡೆದಿರುವ ಅನುಮಾನವಿದ್ದು, ಪೊಲೀಸರು ಹಂತಕರ ಬೆನ್ನು ಬಿದ್ದಿದ್ದಾರೆ. ಒಟ್ಟಾರೆ ಜೈಲಲ್ಲಿ ಮುದ್ದೆಮುರಿದು ಬಂದಿದ್ದಾತ ಹಾಡುಹಗಲೇ‌ ಕೊಲೆಯಾಗಿದ್ದು, ಹಾಸನ ಬೆಚ್ಚಿ ಬಿದ್ದಿದೆ.

Ad Widget . Ad Widget .

Leave a Comment

Your email address will not be published. Required fields are marked *