Ad Widget .

ಕೊರೋನಾ ಸುಳಿಯದಂತೆ ಗ್ರಾಮದ ನಾಲ್ಕು ಮೂಲೆಗೆ ಕಾಯಿ ಮಂತ್ರಿಸಿ ಕಟ್ಟಿದರು….!

ಚಿತ್ರದುರ್ಗ: ಒಂದೆಡೆ ಭಾರತದಲ್ಲಿ ಮೂಡನಂಬಿಕೆ ತೊಲಗಿದೆ ಎನ್ನುತ್ತಿದ್ದರೂ, ಉನ್ನೊಂದೆಡೆ ಜನ ಆಶ್ಚರ್ಯಕರ ರೀತಿಯಲ್ಲಿ ಮೂಡನಂಬಿಕ ಆಚರಣೆಯಲ್ಲಿ ತೊಡಗಿಕೊಳ್ಳುವುದು ಬೆಳಕಿಗೆ ಬರುತ್ತಿದೆ. ಅದರಂತೆ ಕೋವಿಡ್ ಗ್ರಾಮಕ್ಕೆ ಸುಳಿಯುವುದನ್ನು ತಡೆಯಲು, ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಘಟನೆ ಚಿತ್ರದುರ್ಗ ಜಿಲ್ಲೆಯ ನಡೆದಿದೆ.

Ad Widget . Ad Widget .

ಚಳ್ಳಕೆರೆ ತಾಲ್ಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ 15 ಜನರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡದ ಜನಪ್ರತಿನಿಧಿಗಳು , ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ ಮತ್ತು ಕೋವಿಡ್ ತೊಲಗಿಸಲು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿ , ಮಾಸ್ಕ್ ಸಾಮಾಜಿಕ ಅಂತರವಿಲ್ಲದೆ ಮೂಡನಂಬಿಕೆಯಲ್ಲಿ ನಂಬಿಕೆಯಿಟ್ಟುಕೊಂಡಿದ್ದಾರೆ . ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕ್ಷೇತ್ರದ ಗ್ರಾಮದಲ್ಲೇ ಮೂಢನಂಬಿಕೆ ತಾಂಡವ ಆಗುತ್ತಿದ್ದು, ಮೂಢನಂಬಿಕೆ ತೊಲಗಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಾಗಿಲ್ಲ.

Ad Widget . Ad Widget .

Leave a Comment

Your email address will not be published. Required fields are marked *