Ad Widget .

ರಾಜ್ಯಕ್ಕೆ ಕಾಲಿಟ್ಟ ವೈಟ್ ಫಂಗಸ್ ಭೂತ: ರಾಯಚೂರಿನಲ್ಲಿ 6 ಜನರಲ್ಲಿ ಪತ್ತೆ: ಆತಂಕ ಬೇಡ ಎಂದ ವೈದ್ಯರು

ರಾಯಚೂರು (ಮೇ. 22): ಕೊರೋನಾ ಸೋಂಕಿನ ಬೆನ್ನಲ್ಲೇ ಮಾರಕ ಬ್ಲಾಕ್​ ಫಂಗಸ್​, ವೈಟ್​ ಫಂಗಸ್​ ರೋಗ ಸೋಂಕಿತರನ್ನು ಬಾಧಿಸುತ್ತಿದೆ.

Ad Widget . Ad Widget .

ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಬ್ಲಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಇದುವರೆಗೂ 250 ಬ್ಲಾಕ್​ ಫಂಗಸ್​ ಪ್ರಕರಣಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಬ್ಲಾಕ್​ ಫಂಗಸ್ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ​ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಕೂಡ ತಿಳಿಸಿದ್ದಾರೆ.

Ad Widget . Ad Widget .

ರಾಜ್ಯದಲ್ಲಿ ಬ್ಲಾಕ್​ ಫಂಗಸ್​ ಪ್ರಕರಣಗಳು ಹೆಚ್ಚಳಗೊಳ್ಳುತ್ತಿರುವ ಬೆನ್ನಲ್ಲೇ ಮೊದಲ ವೈಟ್​ ಫಂಗಸ್​ ಪ್ರಕರಣ ಬಿಸಿಲು ನಾಡು ರಾಯಚೂರಿನಲ್ಲಿ ಕಂಡು ಬಂದಿದೆ.
ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 6 ಜನರಲ್ಲಿ ಬಿಳಿ ಶಿಲೀಂಧ್ರ ಲಕ್ಷಣಗಳು ಕಂಡು ಬಂದಿದೆ. ಕೋವಿಡ್​​ನಿಂದ ಗುಣಮುಖರಾದವರಲ್ಲಿ ಈ ವೈಟ್​ ಫಂಗಸ್​ ಕಂಡು ಬಂದಿದೆ ಎಂದು ಇಲ್ಲಿನ ಗ್ಯಾಸ್ಟ್ರೋ,ಲಿವರ್ ಹಾಗೂ ಎಂಡೋಸ್ಕೋಪಿ ತಜ್ಞ ಡಾ. ಮಂಜುನಾಥ್ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ ಸುಮಾರು 6 ಜನರಲ್ಲಿ ಈ ವೈಟ್​ ಫಂಗಸ್​ ಪ್ರಕರಣ ಪತ್ತೆಯಾಗಿದೆ.

ಮನೆಯಲ್ಲೇ ಚೇತರಿಸಿಕೊಳ್ಳುತ್ತಿರುವ ಸೋಂಕಿತರಲ್ಲಿ ಈ ಬಿಳಿ ಶಿಲೀಂಧ್ರಗಳು ಕಂಡು ಬಂದಿದ್ದು, ಇದಕ್ಕೆ ಹೆದರಿಕೊಳ್ಳುವ ಅಗತ್ಯವಿಲ್ಲ ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಈ ವೈಟ್​ ಫಂಗಸ್​ಗೆ 14 ದಿನ ಔಷಧಿ ಕೊಡಲಾಗುತ್ತದೆ. 7 ದಿನದಲ್ಲಿ ಸೋಂಕಿತರು ಹುಷಾರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ಕೊಡುವ ಈ ಸೋಂಕು ಜೀವಮಾರಕವಲ್ಲ. ಆದರೆ, ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಎಂದರು.

Leave a Comment

Your email address will not be published. Required fields are marked *