Ad Widget .

ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.!

ಮಂಗಳೂರು. ಮೇ.22: ನಗರದ ಪದವಿನಂಗಡಿಯ ಮೇರಿಹಿಲ್ ಹೆಲಿಪ್ಯಾಡ್ ಬಳಿ ವಿಕೃತ ವ್ಯಕ್ತಿಗಳು ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅಮಾನವೀಯ ಕೃತ್ಯ‌ ನಡೆಸಿದ್ದು, ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಸಂಜೆ ನಡೆದಿದೆ.

Ad Widget . Ad Widget .


ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಇದರ ವಿಡಿಯೊ ಸ್ಥಳೀಯ ಅಪಾರ್ಟ್ಮೆಂಟ್ ಒಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸ್ಥಳಿಯರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

Ad Widget . Ad Widget .


ಆ ಬಳಿಕ ಪ್ರಾಣಿದಯಾ ಸಂಘದ ಸದಸ್ಯರು ವಿಷಯ ತಿಳಿದು ಅಪಾರ್ಟ್ಮೆಂಟ್ ಸಿಸಿ ಟಿವಿ ದೃಶ್ಯಾವಳಿಗಳ ವಿಡಿಯೋ ಸಂಗ್ರಹಿಸಿ ಜಾಲತಾಣಗಳಲ್ಲಿ ‌ಹರಿಬಿಟ್ಟಿದ್ದರು. ಅಲ್ಲದೆ ನಗರ ಡಿಸಿಪಿಗೆ ಕ್ರಮಕ್ಕೆ ಆಗ್ರಹಿಸಿದ್ದರು.


ಸಂಜೆ ವೇಳೆಗೆ ನಾಯಿಯನ್ನು ಎಳೆದೊಯ್ದು ಹಿಂಸೆಗೈದ ಹಾಗೂ ಲಾಕ್ ಡೌನ್ ಸಮಯದಲ್ಲಿ ವಾಹನ ಬಳಸಿದ್ದಕ್ಕಾಗಿ ಗುಲ್ಬರ್ಗ ‌ಮೂಲದ ನಗರದ ಕೊಂಚಾಡಿಯಲ್ಲಿ ವಾಸವಿದ್ದ ಈರಯ್ಯ ಬಸಯ್ಯ ಹಿರೇಮಠ(45) ಎಂಬಾತನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಸುರತ್ಕಲ್ ನಲ್ಲೂ ಇಂತದ್ದೊಂದು ಹೇಯ ಕೃತ್ಯ ನಡೆದು ದಿನಗಳ ಬಳಿಕ ಪೊಲೀಸರು ಆರೋಪಗಳನ್ನು ಬಂಧಿಸಿದ್ದರು. ಮತ್ತೊಮ್ಮೆ ಇಂತಹುದೇ ಕೃತ್ಯ ನಡೆದಿದ್ದು, ಮಾನವೀಯತೆ ಕಳೆದುಕೊಂಡ ಈ ವಿಕೃತ ಮನಸ್ಸುಗಳ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *