Ad Widget .

ಮದುವೆಯಾಗುವುದಾಗಿ ಲಿವಿಂಗ್ ಟುಗೆದೆರ್ : ಕೊನೆಗೇನಾಯಿತು ನೀವೇ ಓದಿ

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿದ ಬಾಲಿವುಡ್ ನಟಿಯೊಬ್ಬರ ಬಾಡಿಗಾರ್ಡ್ ಮೇಲೆ ಅತ್ಯಾಚಾರದ ಕೇಸ್ ದಾಖಲಾಗಿದೆ. ಈ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ಎಂದೂ ಹೇಳಲಾಗುತ್ತಿದೆ.

Ad Widget . Ad Widget .

ಸುಮಾರು ಎಂಟು ವರ್ಷಗಳ ಹಿಂದೆ ಮುಂಬೈನ ಬ್ಯೂಟಿಷಿಯನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿ ಆಕೆ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ. ಈ ವೇಳೆ ಆಕೆ ಜೊತೆ ಲೈಂಗಿಕ ಸಂಬಂಧ ಕೂಡ ಮುಂದುವರಿಸಿದ್ದ.

Ad Widget . Ad Widget .

ಮದುವೆ ವಿಚಾರ ಬಂದಾಗ ಅದನ್ನು ಕಡೆಗಣಿಸುತ್ತಿದ್ದ. ಆದರೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿ ಆಕೆಯಿಂದಲೇ ಹಣ ತೆಗೆದುಕೊಂಡು ಕರ್ನಾಟಕಕ್ಕೆ ಬಂದ ಬಳಿಕ ಆತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಕೆಲ ದಿನಗಳ ಹಿಂದೆ ಬಾಡಿಗಾರ್ಡ್ ತಾಯಿ ಕರೆ ಮಾಡಿ ಇಬ್ಬರದ್ದು ಬೇರೆ ಬೇರೆ ಧರ್ಮ, ಹೀಗಾಗಿ ನಿಮ್ಮಿಬ್ಬರ ಮದುವೆ ಸಾಧ್ಯವಿಲ್ಲ. ಜೂ. 5ಕ್ಕೆ ಬೇರೆ ಮಹಿಳೆ ಜೊತೆ ಆತನ ಮದುವೆ ನಿಶ್ಚಯವಾಗಿದೆ ಎಂದು ಬ್ಯೂಟಿಷಿಯನ್ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಈಕೆ ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಉಪನಗರ ಡಿಎನ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇನ್ನೂ ಬಾಡಿಗಾರ್ಡ್ ಬಂಧನವಾಗಿಲ್ಲ

Leave a Comment

Your email address will not be published. Required fields are marked *