Ad Widget .

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು

ಚೆನ್ನೈ.ಮೇ22: ಇಂತದ್ದೊಂದು ದಿಗಿಲುಗೊಳ್ಳುವ ಆಫರ್ ಬಂದಿದ್ದು ತಮಿಳು ಚಿತ್ರರಂಗದ ಬಲು ಬೇಡಿಕೆಯ ನಟಿ ಹಾಗೂ ಗಾಯಕಿ ಸೌಂದರ್ಯ ನಂದಕುಮಾರ್ ರವರಿಗೆ.  ಗಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸೌಂದರ್ಯ ರಜನಿಕಾಂತ್ ನಟನೆಯ ಕಬಾಲಿ, ವಿಜಯ್ ಮಾಸ್ಟರ್ ನಟನೆಯ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದಾಕೆ.
ಇತ್ತೀಚಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಸಿನಿಮಾರಂಗದ ವಿಚಾರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಸೌಂದರ್ಯಾ ಬಾಲ ನಂದಕುಮಾರ್ ಅವರಿಗೂ ಹೀಗೆಯೇ ಆಗಿದೆ. ಪ್ರಾಧ್ಯಾಪಕನೋರ್ವ ತಮ್ಮ ಜತೆ ಮಲಗುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಕೋಪಗೊಂಡಿರುವ ಅವರು, ಈ ವಿಚಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ಸಾಮಾಜಿಕ ಜಾಲತಾಣದಲ್ಲಿ ನಟಿಯರ ಖಾಸಗಿ ವಿಚಾರದ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಾರೆ. ಕೆಲವರು ಹಗುರವಾಗಿ ಮಾತನಾಡುತ್ತಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇದನ್ನು ನಿರ್ಲಕ್ಷಿಸುತ್ತಾರೆ.

Ad Widget . Ad Widget .

ತೀವ್ರ ಕೆಟ್ಟದಾಗಿ ಕಮೆಂಟ್​ ಮಾಡಿದ್ದರೆ ಅಂಥವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರ ಎದುರೇ ನಟಿಯರು ತಿರುಗೇಟು ನೀಡುತ್ತಾರೆ. ಸೌಂದರ್ಯ ಕೂಡ ಹೀಗೆಯೇ ಮಾಡಿದ್ದಾರೆ.

ಒಬ್ಬ ವ್ಯಕ್ತಿ ತನ್ನನ್ನು ಇನ್ಸ್ಟಾಗ್ರಾಮ್ನಲ್ಲಿ ಉಪನ್ಯಾಸಕ ಎಂದು ಸೌಂದರ್ಯಗೆ ಪರಿಚಯಿಸಿಕೊಂಡಿದ್ದ. ಆತ ಮೆಸೇಜ್​ ಮಾಡುವಾಗ ನಟಿಯ ಜತೆ ಅಸಭ್ಯವಾಗಿ ಮಾತನಾಡಿದ್ದಾನೆ. ಆತ ನಟಿಯೊಂದಿಗೆ ಲೈಂಗಿಕ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ನೀವು ನನ್ನೊಂದಿಗೆ ಮಲಗುತ್ತೀರಾ? ಹಾಗೆ ಮಾಡಿದರೆ ನಿಮಗೆ ಏನು ಬೇಕಾದರೂ ನಾನು ಕೊಡುತ್ತೇನೆ ಎಂದು ಆತ ಮೆಸೇಜ್​ ಮಾಡಿದ್ದಾನೆ.

ಮೆಸೇಜ್ ಮಾಡಿದ ವ್ಯಕ್ತಿ ಸೌಂದರ್ಯ ಅವರನ್ನು ಬ್ಲಾಕ್​ ಮಾಡಿದ್ದಾನಂತೆ. ಈ ಸ್ಕ್ರೀನ್​ ಶಾಟ್​ ಹಂಚಿಕೊಂಡಿರುವ ಸೌಂದರ್ಯ, ಸಮಾಜಕ್ಕೆ ಕೀಟವಾಗಿರುವ ಆ ವ್ಯಕ್ತಿಯನ್ನು ಖಂಡಿತವಾಗಿಯೂ ಹಿಡಿಯುತ್ತೇನೆ ಎಂದು ಶಪಥ ಮಾಡಿದ್ದಾರೆ.  ಕಾಮದಾಹದಿಂದ ಬಳಲಿ‌ ಮೆಸೇಜ್ ಹಾಕಿದ ಆ‌‌ ಪ್ರೊಫೆಸರ್ ಗೆ ಇನ್ನೇನು‌ ಕಾದಿದೆಯೋ?. ಕಾದುನೋಡಬೇಕು.

Leave a Comment

Your email address will not be published. Required fields are marked *