Ad Widget .

ಗಂಡ ಹೊರಹೋದಾಗ ಹೆಂಡತಿ ನಂಬರ್ ಬ್ಯುಸಿ: ರೋಸಿಹೋದ ಪತಿರಾಯ ಏನ್ಮಾಡಿದ ಗೊತ್ತೇ?

ತಮಿಳುನಾಡು : ತಾನೆಷ್ಟೇ ಕರೆ ಮಾಡಿದರೂ  ಹೆಂಡತಿಯ ಫೋನ್ ಬ್ಯುಸಿ ಬಂದದ್ದೇ ಅವಳ ಪ್ರಾಣಕ್ಕೆ ಕುತ್ತು ತಂದಿದೆ. ಪದೇ ಪದೇ ಬ್ಯುಸಿ ಇದ್ದ ಹೆಂಡತಿಯನ್ನ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕನ್ಯಾಕುಮಾರಿಯ ವೆಲಿಚಂದೈ ಗ್ರಾಮದಲ್ಲಿ ನಡೆದಿದೆ.  ಉಮಾ ಕೊಲೆಯಾದ ಮಹಿಳೆ. ರಮೇಶ್ ಕೊಲೆ ಮಾಡಿದ ಆರೋಪಿ.

Ad Widget . Ad Widget .

ಉಮಾ ವೃತ್ತಿಯಲ್ಲಿ ಟೈಲರ್. ರಮೇಶ್ ಸೀಟ್ ಕವರ್ ಹಾಕುವ ಕೆಲಸ ಮಾಡುತ್ತಿದ್ದ. ಉಮಾ ಟೈಲರಿಂಗ್ ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಳಂತೆ. ಯೂಟ್ಯೂಬ್ ನೋಡಿ ಕಲಿಯೋದು, ಕಸ್ಟಮರ್ಸ್ ಜೊತೆ ವಾಟ್ಸಾಪ್, ಕಾಲ್ ನಲ್ಲಿ ಸಂವಹನ ನಡೆಸೋದು,  ಹೀಗೆ ಸದಾ ಆಕೆಯ ಮೊಬೈಲ್ ಬ್ಯುಸಿಯಾಗಿರ್ತಿತ್ತು.

Ad Widget . Ad Widget .

ಕೆಲಸದ ನಡುವೆ ಹೆಂಡತಿ ಜೊತೆ ಮಾತನಾಡಲೆಂದು ಆಕೆಗೆ ಕರೆ ಮಾಡಿದ್ರೆ  ಅವಳ ನಂಬರ್ ಬ್ಯುಸಿಯಾಗಿರುತ್ತಿತ್ತು.ಇದರಿಂದ ಅನುಮಾನಕ್ಕೊಳಗಾದ‌ ರಮೇಶ್
ಮನೆಗೆ ಬರುತ್ತಿದ್ದವರ ಮೇಲೆ ಅನುಮಾನ ಪಟ್ಟು ಕಿರುಕುಳ ಕೊಡಲು ಆರಂಭಿಸಿದ್ದನಂತೆ. ಕಡೆಗೆ ಸಾಂಸಾರಿಕ ಜಗಳ ಉಮಾಳ ತವರು ಮನೆಯವರೆಗೂ ತಲುಪಿ, ರಾಜಿ ಪಂಚಾಯತಿ ನಡೆಸಿದ್ದರಂತೆ. ಆದ್ರೂ ರಮೇಶ್ ಗೆ ಅನುಮಾನ ಹೋಗಿರಲಿಲ್ಲವಂತೆ.
ಕಡೆಗೆ ಬೇಸತ್ತ ಉಮಾ, ಮಕ್ಕಳನ್ನ ಕರೆದುಕೊಂಡು ನೇರ ತವರು ಮನೆಗೆ ಸೇರಿದ್ದಳಂತೆ. ಗ್ರಾಮಸ್ಥರ ಸಮ್ಮುಖದಲ್ಲಿ ಮತ್ತೆ ರಾಜೀ ಪಂಚಾಯತಿ‌ ಮಾಡಿಕೊಂಡು ಹೆಂಡತಿ ಮಕ್ಕಳನ್ನ ಮನೆಗೆ ಕರೆತಂದಿದ್ದ ರಮೇಶ್, ಸ್ವಲ್ಪ ದಿನ ಕಳೆದ ಮೇಲೆ ಉಮಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದ.
ಆ ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ನೆರೆಹೊರೆ ಮತ್ತು ಮಕ್ಕಳಲ್ಲಿ ವಿಚಾರಣೆ ನಡೆಸಿದ್ದಾರೆ. ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Comment

Your email address will not be published. Required fields are marked *