ನವದೆಹಲಿ: ಮನೆಯಲ್ಲೇ ಕುಳಿತು ಸ್ವತಃ ಶಂಕಿತ ವ್ಯಕ್ತಿಗಳೇ ಕೋವಿಡ್ ಟೆಸ್ಟ್ ಮಾಡಿಕೊಳ್ಳುವ ಕೊವಿ-ಸೆಲ್ಫ್ ಎಂಬ ಟೆಸ್ಟಿಂಗ್ ಕಿಟ್ ಇನ್ನೇನು ಹೊರಬರಲಿದೆ. ಇದೊಂದು ರಾಪಿಡ್ ಆಂಟಿಜನ್ ಮಾದರಿ ಪರೀಕ್ಷಾ ಸಾಧನವಾಗಿದ್ದು, ಇದರ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಒಪ್ಪಿಗೆ ಸೂಚಿಸಿದೆ.
ಈ ಟೆಸ್ಟಿಂಗ್ ಕಿಟ್, ಬಳಕೆದಾರರ ಮಾಹಿತಿ ಚೀಟಿ, ಫ್ರೀ-ಫೀಲ್ಡ್ ಎಕ್ಸ್ಟ್ರಾಕ್ಷನ್ ಟ್ಯೂಬ್, ಟೆಸ್ಟಿಂಗ್ ಸ್ಟ್ರಿಪ್, ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್ ಅನ್ನು ಒಳಗೊಂಡಿದೆ.
ಇದರ ಉಪಯೋಗದಿಂದ ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಮನೆಯಲ್ಲಿ ಕುಳಿತು ಬಳಸಬಹುದಾಗಿರುವುದರಿಂದ ವಯಸ್ಸಾದವರು, ಅಂಗವಿಕಲರು ಆಸ್ಪತ್ರೆಗೆ ತೆರಳದೆ ತಮ್ಮ ಕೋವಿಡ್ ಪರೀಕ್ಷೆ ನಡೆಸಿ ಕೊಳ್ಳಬಹುದಾಗಿದೆ.
ಇದರ ಮೂಲಕ ಕೋವಿ್ ಟೆಸ್ಟ್ ಮಾಡಿಕೊಳ್ಳಲು ಐಸಿಎಂಆರ್ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು ಇದರ ಮೂಲಕ ಪರೀಕ್ಷೆ ಮಾಡಿಸಿಕೊಳ್ಳುವ ಮೊದಲು ತಮ್ಮ ಮೊಬೈಲ್ ನಲ್ಲಿ ಮೈಲ್ಯಾಬ್ ಕೊವಿಸೆಲ್ಫ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಹೆಸರು, ವಯಸ್ಸು ಸೇರಿದಂತೆ ಇತರ ಮಾಹಿತಿಗಳನ್ನು ತುಂಬಬೇಕು. ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ಸ್ವಚ್ಛವಾದ ಟೇಬಲ್ ಮೇಲೆ ಕಿಟ್ಟನ್ನು ತೆರೆದು ಉಪಯೋಗಿಸಬೇಕು.
ಇನ್ನು ಬಳಕೆದಾರರಿಗೆ ಈ ಕೆಳಗಿನ ಸೂಚನೆಗಳ್ನು ನೀಡಲಾಗಿದೆ.
1) ಕೊರೋನಾ ರೋಗ ಲಕ್ಷಣಗಳಿರುವವರು ಮಾತ್ರ ಈ ಕಿಟ್ ಬಳಸಬೇಕು. ವಿವೇಚನಾ ರಹಿತವಾಗಿ ಸುಖಾಸುಮ್ಮನೇ ಬಳಸುವಂತಿಲ್ಲ.
2) ಕೋವಿಡ್ ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕದಲ್ಲಿರುವವರು ಇದನ್ನು ಬಳಸಬಹುದು.
3) ಪರೀಕ್ಷೆ ಮುಗಿದ ನಂತರ ಕಿಟ್‌ನಲ್ಲಿರುವ ಸ್ಟೀಪ್‌ನಲ್ಲಿ ಕಾಣಿಸುವ ಫಲಿತಾಂಶದ ಫೋಟೋ ತೆಗೆಯಬೇಕು. 4) ಯಾವ ಮೊಬೈಲ್ ಸಂಖ್ಯೆಯಿಂದ ಮೈಲ್ಯಾಬ್ ಕೊವಿಸೆಲ್ಫ್ ಆ್ಯಪ್ ಡೌನ್ಲೋಡ್ ಮಾಡಲಾಗಿದೆಯೋ ಅದೇ ಮೊಬೈಲ್ ಸಂಖ್ಯೆಯಿಂದ ಸ್ವೀಪ್ ಫೋಟೋ ಅಪ್‌ಲೋಡ್ ಮಾಡಬೇಕು.
5) ಕೋವಿಡ್ ಗುಣಲಕ್ಷಣಗಳಿದ್ದರೂ ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅಂಥವರು ತತ್‌ಕ್ಷಣವೇ RT – PCR ಟೆಸ್ಟ್‌ಗೆ ಒಳಗಾಗಬೇಕು.
6) ಸೆಲ್ಫ್ ಟೆಸ್ಟ್‌ನಲ್ಲಿ ಪೊಸಿಟಿವ್ ಬಂದವರನ್ನು ಶಂಕಿತ ಕೊರೊನಾ ಸೋಂಕಿತರೆಂದು ಪರಿಗಣಿಸಲಾಗುತ್ತದೆ. ಅಂಥವರು, ICMR ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.