Ad Widget .

ಮಹಾರಾಷ್ಟ್ರ: 13 ನಕ್ಸಲರ ಎನ್ಕೌಂಟರ್

ಮಹಾರಾಷ್ಟ್ರ: ರಾಜ್ಯದ ಗಡಚಿರೋಲಿ ಜಿಲ್ಲೆಯ ಕೊಟ್ಮಿ ಅರಣ್ಯ ಪ್ರದೇಶದಲ್ಲಿ ಸಿ-60 ಕಮಾಂಡೋ ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತ್ಯೆಯಾದ ಘಟನೆ ಇಂದು ಮುಂಜಾನೆ ನಡೆದಿದೆ.

Ad Widget . Ad Widget .

ಮುಂಜಾನೆ ಐದು ಮೂವತ್ತರ ಸುಮಾರಿಗೆ ಮಾವೋವಾದಿಗಳು ಅರಣ್ಯದ ನಡುವೆ ಒಟ್ಟು ಸೇರಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ಸುಸಜ್ಜಿತ ದಾಳಿ ನಡೆಸಿ ನಕ್ಸಲರನ್ನು ಎನ್ಕೌಂಟರ್ ಮಾಡಿದ್ದಾರೆ. ಪೊಲೀಸರನ್ನು ಕಂಡ ನಕ್ಸಲರು ತೀವ್ರ ಪ್ರತಿದಾಳಿ ನಡೆಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು 13 ನಕ್ಸಲರು ಹತರಾಗಿ, ಉಳಿದವರು ದಟ್ಟ ಅರಣ್ಯ ಪಿರದೇಶದಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಿಂದ ಶಸ್ತ್ರಾಸ್ಥ್ರಗಳನ್ನು ವಶಪಡಿಸಿಕೊಂಡಿದ್ದು, ಅರಣ್ಯದಲ್ಲಿ ಕೂಂಬಿಂಗ್ ಮುಂದುವರೆಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *