Ad Widget .

ಮತ್ತೆ 15 ದಿನ ರಾಜ್ಯ ಲಾಕ್: ಏನೇನಿರುತ್ತೆ? ಏನಿರಲ್ಲ?ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು.ಮೇ21: ರಾಜ್ಯದಲ್ಲಿ ಮೇ.24ರಿಂದ ಜೂನ್ 7ರವರೆಗೆ ವಿಸ್ತರಣೆಗೊಂಡಿರುವಂತ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ.

Ad Widget . Ad Widget .

ಯಾವುದಕ್ಕೆ ಅನುಮತಿ:

Ad Widget . Ad Widget .

ಕೋವಿಡ್ ಸುರಕ್ಷಾ ನಿಯಮಗಳೊಂದಿಗೆ ಎಲ್ಲಾ ಬಗೆಯ ನಿರ್ಮಾಣ, ದುರಸ್ತಿ ಚಟುವಟಿಕೆಗಳಿಗೆ ಅನುಮತಿ.
ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೂ ಯಾವುದೇ ನಿರ್ಬಂಧವಿಲ್ಲ.
ಎಲ್ಲಾ ಬಗೆಯ ಕೈಗಾರಿಕೆಗಳು, ಸಂಸ್ಥೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದು.
ಸಿಬ್ಬಂದಿ ಓಡಾಟಕ್ಕೆ ಸಂಸ್ಥೆಗಳಿಂದ ಪಡೆದುಕೊಂಡ ಐಡಿ ಕಾರ್ಡ್ ತೋರಿಸುವುದು ಕಡ್ಡಾಯ.
ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು ತರಕಾರಿ, ಹಾಲಿನ ಬೂತ್, ಮೀನು-ಮಾಂಸ, ಪಶು ಆಹಾರ ಅಂಗಡಿಗಳ ಸೇವೆ ಅಭಾಧಿತ.
ತರಕಾರಿ, ಹಣ್ಣು ಮಾರಾಟಕ್ಕೆ ಅನುಮತಿ.
ಬ್ಯಾಂಕ್, ವಿಮಾ ಕಚೇರಿ, ಎಟಿಎಂ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ಷೇರು ವಿನಿಮಯ ಸೇವಾ ಕೇಂದ್ರಗಳಿಗೆ ಅವಕಾಶ.
ಮದುವೆ ಸಮಾರಂಭಗಳಿಗೆ ಕೇವಲ 25 ಜನರಿಗೆ ಅವಕಾಶ.
ಅಂತ್ಯಕ್ರಿಯೆಯಲ್ಲಿ 5 ಜನರಿಗೆ ಮಾತ್ರ ಅವಕಾಶ.
ಸರಕು ಸಾಗಾಣಿಕೆ ಮುಕ್ತ ಅವಕಾಶ.

ಹೋಟೆಲ್ ಗಳಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗೋದಕ್ಕೆ ಅವಕಾಶ. ಆದ್ರೇ ವಾಹನದಲ್ಲಿ ತೆರಳುವಂತಿಲ್ಲ. ಕಾಲ್ನಡಿಗೆಯಲ್ಲಿ ತೆರಳಬೇಕು.
ಇ-ಕಾಮರ್ಸ್ ಚಟುವಟಿಕೆಗೆ ಅವಕಾಶ
ಅನುಮತಿ ನೀಡಿದ ಕೈಗಾರಿಕೆಗಳು ತೆರಯಲು ಅವಕಾಶ.
ವೈದ್ಯಕೀಯ ಉತ್ಪಾದನಾ ಕೈಗಾರಿಕೆ ತೆರೆಯಲು ಅವಕಾಶ.
ಅಗತ್ಯ ವಸ್ತು ಉತ್ಪಾದನಾ ಕೈಗಾರಿಕೆಗಳಿಗೆ ಅನುಮತಿ.


ಯಾವುದಕ್ಕೆ ನಿರ್ಬಂಧ:

ಶಾಲೆ ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ ಬಂದ್.
ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ, ಕ್ರೀಡಾ ಸಂಕೀರ್ಣ, ಅಮ್ಯಾಸ್ ಮೆಂಟ್ ಪಾರ್ಕ್, ಸಭಾಂಗಣ, ಅಸೆಂಬ್ಲಿ ಹಾಲ್ ಬಂದ್.
ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ. ಆದ್ರೇ ದೈನಂದಿನ ಪೂಜಾ ಕೈಂಕರ್ಯಕ್ಕೆ ತಡೆ ಇಲ್ಲ.
ಹೋಟೆಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ.
ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ನಿಷೇಧ.
ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದ್ದು.
ಅಂತರ್ ಜಿಲ್ಲಾ ಸಂಚಾರಕ್ಕೆ ಅವಕಾಶ ಇಲ್ಲ.

Leave a Comment

Your email address will not be published. Required fields are marked *