Ad Widget .

ತನ್ನ‌ ಬಾಲಕ್ಕೇ ಬೆಂಕಿಇಟ್ಟುಕೊಂಡ ದೊಡ್ಡಣ್ಣ: ಅಮೇರಿಕಾವನ್ನು ಒಂಟಿಯಾಗಿರಿಸಿದ ಇಸ್ರೇಲ್ ಪ್ರೇಮ

ವಿಶ್ವ ಕೊರೊನಾ ಬೆಂಕಿಯಲ್ಲಿ ಬಸವಳಿಯುತ್ತಿದ್ದರೆ, ಇತ್ತ ಕಡೆ ಇಸ್ರೇಲ್​​- ಪ್ಯಾಲೆಸ್ತೇನ್​​ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿದಿದೆ. ಪ್ಯಾಲೆಸ್ತೇನ್​​ನಲ್ಲಿ ಮೃತರ ಸಂಖ್ಯೆ 227ಕ್ಕೆ ಏರಿಕೆಯಾದ್ರೆ, ಇಸ್ರೇಲ್ ಕಡೆ 12 ಮಂದಿ ಸಾವನ್ನಪ್ಪಿದ್ಧಾರೆ. ಈ ನಡುವೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕದನ ವಿರಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ ನಂತರ ಮಾತನಾಡಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್​ ತನ್ನ ಗುರಿ ತಲುಪುವವರೆಗೂ ಬಾಂಬ್ ದಾಳಿ ಮುಂದುವರಿಸಲಿದೆ ಅಂತ ಹೇಳಿದ್ದಾರೆ. ಮತ್ತೊಂದು ಕಡೆ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ಆಟ ಮುಂದುವರಿದಿದೆ. ಎಲ್ಲರೂ ಇಸ್ರೇಲ್ ಮತ್ತು ಗಾಜಾದಲ್ಲಿ ಅಧಿಕಾರದಲ್ಲಿರೋ ಹಮಾಸ್ ನಡುವೆ ಕದನ ವಿರಾಮ ತರಲು ಯತ್ನಿಸುತ್ತಿದ್ದರೆ, ಅಮೆರಿಕ ಮಾತ್ರ ನಿರಂತರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆ ಮಾಡುತ್ತಾ ಇದೆ.
ನಿನ್ನೆಯಷ್ಟೇ ಫ್ರಾನ್ಸ್​​ ಹಲವು ದೇಶಗಳೊಂದಿಗೆ ಸೇರಿಕೊಂಡು ಇಸ್ರೇಲ್-ಪ್ಯಾಲೆಸ್ತೇನ್ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಿತ್ತು. ಆದ್ರೆ ಇದಕ್ಕೆ 15 ಸದಸ್ಯ ರಾಷ್ಟ್ರಗಳ ಬೆಂಬಲ ಇದ್ದರೂ ಕೂಡ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಇದರಿಂದ ಇಸ್ರೇಲ್-ಗಾಜಾ ಸಂಘರ್ಷವನ್ನು ಬಗೆಹರಿಸೋ ಅಮೆರಿಕಾದ ಪ್ರಯತ್ನಗಳಿಗೆ ತಡೆಯಾಗುತ್ತೆ ಅಂತ ಹೇಳಿದೆ. ಈ ಮೂಲಕ ಬೈಡೆನ್ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ, ಫ್ರಾನ್ಸ್ ನಡುವೆ ಹೊಸ ಟೆನ್ಶನ್ ಶುರುವಾದಂತಿದೆ. ಇ ನಡುವೆ ಡೆಮಾಕ್ರಟಿಕ್ ಪಕ್ಷದ 130ಕ್ಕೂ ಅಧಿಕ ಸಂಸದರು ಈ ಕೂಡಲೇ ಕದನ ವಿರಾಮಕ್ಕೆ ಬೇಕಾದ ಎಲ್ಲಾ ಹೆಜ್ಜೆ ಇಡಬೇಕು ಅಂತ ಒತ್ತಾಯಿಸಿದ್ರೂ ಬೈಡೆನ್ ಕೇಳುತ್ತಿಲ್ಲ. ಒಂದು ರೀತಿಯಲ್ಲಿ ಅಮೆರಿಕ ಇಸ್ರೇಲ್​​ಗಾಗಿ ಏಕಾಂಗಿಯಾಗುತ್ತಾ ಹೋಗುತ್ತಿದೆ ಅಂತ ಹೇಳಬಹುದು. ಮತ್ತೊಂದು ಕಡೆ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ, ಪ್ಯಾಲೆಸ್ತೇನ್​​ನ ಮಾನವ ಹಕ್ಕು ಆಯೋಗ ಅಲ್​​ ಹಕ್​​ ಗಾಜಾ ಮೇಲೆ ಇಸ್ರೇಲ್ ದಾಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದೆ. ಇಸ್ರೇಲ್ ಪ್ಯಾಲೆಸ್ಥೇನ್ ಮೇಲೆ ದಾಳಿ ನಡೆಸ್ತಿರೋದು ನೋಡುತಿದ್ದರೆ, ನಮ್ಮ ದೇಶದ ವರ್ಣಬೇಧ ಯುಗವನ್ನು ನೆನಪಿಸುತ್ತಿದೆ ಅಂತ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮಪೋಸಾ ಹೇಳಿದ್ಧಾರೆ. ಜರ್ಮನಿಯಲ್ಲಿ 2 ಸಾವಿರ ಜನ ಬೀದಿಗಿಳಿದು ಪ್ಯಾಲೆಸ್ತೇನ್ ಬಾವುಟ ಹಿಡಿದು ಇಸ್ರೇಲ್ ವಿರುದ್ಧ ಪ್ರತಿಭಟಿಸಿದ್ರೆ, ಕುವೈಟ್​​ನಲ್ಲಿ ಇಸ್ರೇಲ್ ಬಾವುಟ ಸುಟ್ಟು ಪ್ಯಾಲೆಸ್ತೇನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜಗತ್ತಿನ ಮುಂದೆ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾ ಏಕಾಂಗಿಯಾಗುತ್ತಾ ಹೋಗುತ್ತಿದ್ದು, ಪರಿಣಾಮ ಏನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *