Ad Widget .

ಮುಹೂರ್ತದ ವೇಳೆ ಮಂಗಲಸೂತ್ರ ಎಗರಿಸಿದ ಅರ್ಚಕ: ಮೂರನೇ ಕಣ್ಣಲ್ಲಿ ಕೈಚಳಕ ಬಯಲು

ತೆಲಂಗಾಣ: ಮದುವೆ ಕಾರ್ಯ ನಡೆಸಿಕೊಡಲು ಬಂದ  ಅರ್ಚಕನೋರ್ವ ತಾಳಿ ಎಗರಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅರ್ಚಕನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರ್ಚಕನೋರ್ವ ಮದುವೆ ಕಾರ್ಯದಲ್ಲಿ ಮಂತ್ರ ಹೇಳುತ್ತಿರುವ ಸಂದರ್ಭದಲ್ಲಿ ಕೈ ಚಳಕದಿಂದ   ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ,  ನಕಲಿ ಮಾಂಗಲ್ಯ ಸರವನ್ನು ವರನಿಂದ ಕಟ್ಟಿಸಿದ್ದಾನೆ. ಇದು ಮದುವೆ ದಿನ ಯಾರಿಗೂ ಗೊತ್ತಾಗಿಲ್ಲ. ಮನೆಗೆ ತೆರಳಿದ ಬಳಿಕ ಮಾಂಗಲ್ಯ ಸರ ಬದಲಾಗಿರುವ ಬಗ್ಗೆ ಮನೆಯವರಿಗೆ ತಿಳಿದಿದೆ.

Ad Widget . Ad Widget .

ಇದರಿಂದ ಮನೆ ಕಡೆಯವರಿಗೆ ಯಾರ ಬಗ್ಗೆ ಸಂಶಯ ವ್ಯಕ್ತಪಡಿಸಬೇಕು ಎನ್ನುವುದು ತಿಳಿದಿರಲಿಲ್ಲ. ಇದರಿಂದಾಗಿ ಮದುವೆ ದಿನದ ಸಿಸಿಟಿವಿ ದೃಶ್ಯಗಳನ್ನು ನೋಡಿದ್ದಾರೆ. ಈ ವೇಳೆ ಸಿಸಿಟಿವಿಯಲ್ಲಿ ಅರ್ಚಕನ ಕೃತ್ಯ ಸೆರೆಯಾಗಿದೆ.

Ad Widget . Ad Widget .

ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಾಳಿ ಕಟ್ಟಿ ವಧು-ವರರನ್ನು ಹರಸಿ ಕಳುಹಿಸಬೇಕಾದ ಅರ್ಚಕನೇ ಈ ರೀತಿ  ಮಾಡಿದ್ರೆ ಹೇಗೆ? ಎಂಬ ಪ್ರಶ್ನೆ ಮೂಡಿದೆ.

Leave a Comment

Your email address will not be published. Required fields are marked *