ಪರಸತಿಯ ಜೊತೆಗಿನ ಸರಸದ ಪೋಟೋ ಸ್ಟೇಟಸ್ ಹಾಕಿದ ಪ್ರಿಯಕರ: ವಿಷಯ ತಿಳಿದ ಪತಿ ಏನ್ಮಾಡಿದ ಗೊತ್ತೇ?

ಚಾಮರಾಜನಗರ.ಮೇ.20: ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರಿಯಕರ ತಮ್ಮಿಬ್ಬರ ಅನೈತಿಕ ಸಂಬಂಧದ ಫೋಟೊ ಹಾಗೂ ವೀಡಿಯೊಗಳನ್ನು ವಾಟ್ಸಪ್ ನ ಸ್ಟೇಟಸ್ ನಲ್ಲಿ ಹಾಕಿ ವಿಕೃತಿ ಮೆರೆಯುತ್ತಿದ್ದ. ಇದನ್ನು ಗಮನಿಸಿದ ಆಕೆಯ ಪತಿ ಪ್ರಿಯಕರನನ್ನು ಕೊಂದು ಆತನ ವಿಕೃತಿಗೆ ಅಂತ್ಯ ಹಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

Ad Widget ... ..

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಪತ್ನಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ ಬಸವ ಶೆಟ್ಟಿ (37) ಎಂಬಾತನನ್ನು ಗಂಡ ಶಿವಣ್ಣ ಕೊಲೆ ಮಾಡಿದ್ದಾನೆ.

Ad Widget

ಪತ್ನಿ ಸೌಭಾಗ್ಯ ಮತ್ತು ಬಸವಶೆಟ್ಟಿ ನಡುವೆ ಹಲವು ದಿನಗಳಿಂದ ಅಕ್ರಮ ಸಂಬಂಧ ಇತ್ತು. ಸೌಭಾಗ್ಯಳನ್ನು ಚುಂಬಿಸುತ್ತಿರುವ ಅವಳ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಫೋಟೊಗಳನ್ನು ಪ್ರಿಯಕರ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ವಿಕೃತಿ ಮೆರೆಯುತ್ತಿದ್ದ. ಈ ಫೋಟೋವನ್ನು ಶಿವಣ್ಣನೂ ನೋಡಿದ್ದ. ಭಾನುವಾರ ರಾತ್ರಿ ಮನೆಗೆ ಮರಳಿದಾಗ ಪತ್ನಿ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿಯನ್ನು ನೋಡಿ ಕೊಂದು ಹಾಕಿದ್ದಾನೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *