Ad Widget .

ಬ್ಲ್ಯಾಕ್ ಫಂಗಸ್ ನಿರ್ಲಕ್ಷ್ಡಿಸಬೇಡಿ ಏಮ್ಸ್ ಮಾರ್ಗಸೂಚಿ ಸಲಹೆ, ಪತ್ತೆ ಕ್ರಮ ಮತ್ತು ಆರೈಕೆ ಸಲಹೆಗಳು ಇಲ್ಲಿವೆ

ನವದೆಹಲಿ.ಮೇ.20: ಕೊರೋನಾ ಎರಡನೇ ಅಲೆ ಅಬ್ಬರದ ನಡುವೆಯೇ ಬ್ಲ್ಯಾಕ್ ಫಂಗಸ್ ವೈದ್ಯರ ಹಾಗೂ ಜನಸಾಮಾನ್ಯರ ಆತಂಕವನ್ನು ಹೆಚ್ಚಿಸಿದೆ.

Ad Widget . Ad Widget .

ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಅಥವಾ ಮ್ಯುಕೋರ್ಮೈಕೋಸಿಸ್ಗೆ ಸಂಬಂಧಿಸಿದಂತೆ ದೆಹಲಿಯ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಮಾರ್ಗಸೂಚಿಯಲ್ಲಿ ವಿವರಿಸಿದೆ.

Ad Widget . Ad Widget .

ಅನಿಯಂತ್ರಿತ ಮಧುಮೇಹ ಹೊಂದಿರುವವರು ಹಾಗೂ ಅತಿ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡುವವರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಲುಬೇಗ ತುತ್ತಾಗುತ್ತಾರೆ. ಇದು ಅಪರೂಪದ ಸೋಂಕಾದರೂ ಉಲ್ಬಣಿಸಿದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಸುಮಾರು 90 ಜನ ಸೋಂಕಿನಿಂದ ಮೃತರಾಗಿದ್ದಾರೆ. ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದು, ಅಲ್ಲಿನ ರಾಜ್ಯ ಸರ್ಕಾರ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದೆ.

ಬ್ಲ್ಯಾಕ್ ಫಂಗಸ್ ಯಾರಿಗೆ ಹೆಚ್ಚು ಅಪಾಯಕಾರಿ?

ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು.
ಅತಿ ಹೆಚ್ಚು ಸ್ಟಿರಾಯ್ಟ್ ಬಳಕೆಗೆ ಒಳಗಾದವರು. ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು.ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವವರು, ದೀರ್ಘ ಅನಾರೋಗ್ಯ ಸಮಸ್ಯೆಯುಳ್ಳವರು, ಅತಿಯಾದ ಶೀತ, ನೆಗಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಮೆಡಿಕಲ್ ಆಕ್ಸಿಜನ್ ಸಹಾಯ ಪಡೆಯುವವರೆಲ್ಲರೂ ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಏಮ್ಸ್ ತಿಳಿಸಿದೆ.

ಬ್ಲ್ಯಾಕ್ ಫಂಗಸ್ ಗುರುತಿಸುವುದು ಹೇಗೆ?:

ಮೂಗಿನಿಂದ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಎರಡೆರಡು ದೃಷ್ಟಿ, ಕಣ್ಣು ಕೆಂಪಾಗುವುದು, ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು. ಮುಖ ಮರಗಟ್ಟುವಿಕೆ ಅಥವಾ ಝುಮ್ಮೆನಿಸುವ ಅನುಭವ, ಆಹಾರ ಸೇವನೆ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು. ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು, ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು ಮುಂತಾದವು ಬ್ಲ್ಯಾಕ್ ಫಂಗಸ್ ಲಕ್ಷಣಗಳಾಗಿವೆ.

ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೇನು ಮಾಡಬೇಕು?.

ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ENT ವೈದ್ಯರು, ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು, ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು,ಇತರ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬಾರದು, ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆ್ಯಂಟಿ ವೈರಲ್ ಡ್ರಗ್ ಪಡೆಯಬಾರದು. ವೈದ್ಯರ ಸಲಹೆ ಮೇರೆಗೆ MRI, ಸಿಟಿ ಸ್ಕ್ಯಾನ್ ಮಾಡಿಸಬೇಕು ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.

Leave a Comment

Your email address will not be published. Required fields are marked *