Ad Widget .

ಇತಿಹಾಸ ಸೃಷ್ಟಿಸಿದ ಕೇರಳ ಸರ್ಕಾರ: ದಲಿತ ಶಾಸಕನಿಗೆ ಸಿಕ್ತು ಮಹತ್ವದ ಖಾತೆ

ತಿರುವನಂತಪುರ.ಮೇ.18: ಇತ್ತೀಚೆಗೆ ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಭರ್ಜರಿ ವಿಜಯ ಸಾಧಿಸಿದೆ. ಇದೀಗ ರಾಜ್ಯದಲ್ಲಿ ಎಡಪಂಥೀಯವ ಸರ್ಕಾರ ಸತತವಾಗಿ ಎರಡನೆ ಬಾರಿಗೆ ಅಧಿಕಾರಕ್ಕೆ ಹಿಡಿಯುತ್ತಿದೆ. ಪಿಣರಾಯಿ ವಿಜಯನ್ ಅವರ ಎರಡನೇ ಅವಧಿಯ ಸರ್ಕಾರವು ದೇವಸ್ವಂ ಇಲಾಖೆ (ಮುಜರಾಯಿ ಇಲಾಖೆ)ಗೆ ಚೆಲಕ್ಕರ ಕ್ಷೇತ್ರದ ಶಾಸಕರಾಗಿರುವ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರನ್ನು ಸಚಿವರನ್ನಾಗಿ ನೇಮಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

1996 ರಲ್ಲಿ ಇ.ಕೆ.ನಯನಾರ್ ಅವರ ಸಂಪುಟದಲ್ಲಿ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ಸಚಿವರಾಗಿದ್ದ ಪರಿಶಿಷ್ಟ ಜಾತಿಗೆ ಸೇರಿರುವ ಕೆ. ರಾಧಾಕೃಷ್ಣನ್ ಅವರು ಪ್ರಸ್ತುತ ಸಿಪಿಎಂ ಕೇಂದ್ರ ಸಮಿತಿ ಸದಸ್ಯರಾಗಿದ್ದು, ದಲಿತ ಶೋಷನ್ ಮುಕ್ತಿ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
2001, 2006 ಮತ್ತು 2011 ರಲ್ಲಿ ಚೆಲಕ್ಕರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕೆ. ರಾಧಾಕೃಷ್ಣ 2001 ರಲ್ಲಿ ಮುಖ್ಯ ವಿಪ್ ಮತ್ತು 2006 ರಲ್ಲಿ ವಿಧಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.

Ad Widget . Ad Widget . Ad Widget .

2016 ರ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಅವರನ್ನು ಚೆಲಕ್ಕರ ಕ್ಷೇತ್ರದಿಂದ ಮತ್ತೇ ಕಣಕ್ಕಿಳಿಸಿತ್ತು. ಪ್ರಸ್ತುತ ಸಚಿವ ಸಂಪುಟದಲ್ಲಿ ಅವರಿಗೆ ದೇವಸ್ವಂ, ಸಂಸದೀಯ ವ್ಯವಹಾರಗಳು, ಎಸ್‌ಸಿ / ಎಸ್‌ಟಿ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.

Leave a Comment

Your email address will not be published. Required fields are marked *