Ad Widget .

ಮೇ ಅಂತ್ಯಕ್ಕೆ ಬೆಂಗಳೂರು ತಲುಪಲಿದೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ

ಬೆಂಗಳೂರು:  ಬಹುನಿರೀಕ್ಷಿತ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಮೇ ಅಂತ್ಯ ವೇಳೆಗೆ ಬೆಂಗಳೂರಿನಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ರಾಜ್ಯದಲ್ಲಿ ಲಸಿಕೆ ಕೊರತೆ ಎದ್ದು ಕಾಣುತ್ತಿದ್ದು, ರಷ್ಯಾದ ಲಸಿಕೆ ಲಭ್ಯವಾದರೆ ಲಸಿಕೆಯ ಕೊರತೆ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು ಎಂದು ಅಭಿಪ್ರಾಯಿಸಲಾಗಿದೆ

Ad Widget . Ad Widget .

ಸ್ಪುಟ್ನಿಕ್ ಲಸಿಕೆ ಅಭಿಯಾನವನ್ನು ಆರಂಭಿಸುವ ಸಂಬಂಧ ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಡಾ. ರೆಡ್ಡೀಸ್ ಲ್ಯಾಬ್ ಸೋಮವಾರ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ಎಲ್ಲಾ ಅಪೋಲೋ ಆಸ್ಪತ್ರೆಗಳಲ್ಲೂ ಲಸಿಕೆ ಲಭ್ಯವಾಗಲಿದೆ. ಲಸಿಕೆಯ ದರ ರೂ.1,200 ರಿಂದ 1,250 ರಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಸದ್ಯಕ್ಕೆ ಲಸಿಕೆ ಪ್ರಮಾಣಗಳು ಕಡಿಮೆ ಇರಬಹುದು. ಲಸಿಕೆ ಸಂಗ್ರಹಣೆ, ಸಾರಿಗೆ, ಆಡಳಿತ ಮತ್ತು ಮೇಲ್ವಿಚಾರಣೆಗಾಗಿ ಡಿಆರ್‌ಎಲ್ ಅಪೊಲೊವನ್ನು ಅವಲಂಬಿಸಿದೆ. ಪ್ರಾಯೋಗಿಕ ಭಾಗವಾಗಿ ರಷ್ಯಾದ ಡಿಆರ್‌ಎಲ್’ನಿಂದ 1.5 ಲಕ್ಷ ಲಸಿಕೆಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಮದಾಗಲಿದೆ ಎಂದು ಆಪೋಲೋ ಆಸ್ಪತ್ರೆಯ ಹಿರಿಯ ವೈದ್ಯ ಹೇಳಿದ್ದಾರೆ.

ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಂಗೀತಾ ರೆಡ್ಡಿಯವರು ಮಾತನಾಡಿ, ತಿಂಗಳಲ್ಲಿ 10 ಲಕ್ಷ ಲಸಿಕೆಗಳು ಲಭ್ಯವಾಗಲಿದೆ. ರೆಡ್ಡೀಸ್‌ ಲ್ಯಾಬೊರೇಟರಿ ಜೊತೆಗೆ ಅಪೊಲೊ ಆಸ್ಪತ್ರೆಯು ಸಹಯೋಗ ಹೊಂದಿರುವುದಕ್ಕೆ ಹೆಮ್ಮೆ ಎನಿಸಲಿದೆ. ಒಂದು ತಿಂಗಳಲ್ಲಿ 10 ಲಕ್ಷ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *