ತೌಕ್ತೆ ಬಳಿಕ ಬರುತ್ತಿದೆ ಯಾಸ್ ಚಂಡಮಾರುತ..!

ನವದೆಹಲಿ: ಒಂದು ಚಂಡಮಾರುತ ತಂದಂತಹ ಅವಾಂತರವೇ ಇನ್ನು ಮುಗಿದಿಲ್ಲ. ಅಷ್ಟರಲ್ಲೇ ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಮೊದಲನೆಯ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದರೆ ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳಲಿದೆ.

Ad Widget ... ..

ಮೇ 23ರಂದು ಹೊಸ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಅದಕ್ಕೆ ಯಾಸ್ ಎಂದು  ಹೆಸರಿಡಲು ತೀರ್ಮಾನಿಸಲಾಗಿದೆ.

Ad Widget

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಈ ಚಂಡಮಾರುತ ಮ್ಯಾನ್ಮಾರ್ ಕಡೆ ತೆರಳುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಇದೀಗ ಚಂಡಮಾರುತ ಸೃಷ್ಟಿಗೆ  ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Leave a Comment

Your email address will not be published. Required fields are marked *