Ad Widget .

ಕಾಸರಗೋಡು: ಅಕ್ರಮ ತಂಬಾಕು ಉತ್ಪನ್ನ ಸಾಗಾಟ: ಓರ್ವ ಬಂಧನ

ಕಾಸರಗೋಡು, ಮೇ.೧೯: ಕಾರಿನಲ್ಲಿ ಅಕ್ರಮವಾಗಿ ೧೧೦ ಕಿಲೋ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

Ad Widget . Ad Widget .

ವಡಗರದ ಅಬೂಬಕ್ಕರ್ (೩೪)ಬಂಧಿತ ಆರೋಪಿ. ಅಬಕಾರಿ ಸಿಬ್ಬಂದಿ ಬುಧವಾರ ಬೆಳಿಗ್ಗೆ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.
ಈತನಿಗೆ ಅಬಕಾರಿ ಸಿಬ್ಬಂದಿ ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದ. ಇದನ್ನು ಗಮನಿಸಿ ಬೆನ್ನಟ್ಟಿದ ಸಿಬ್ಬಂದಿ ಉಪ್ಪಳ ಹಿದಾಯತ್ ನಗರದಲ್ಲಿ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ತಂಬಾಕು ಉತ್ಪನ್ನ ಪತ್ತೆಯಾಗಿದ್ದು, ಮಂಗಳೂರಿನಿoದ ಕೇರಳದ ವಡಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *