ವಿಶ್ವಸುಂದರಿ ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ. ಯಾರೀ ಸುಂದರಿ ಗೊತ್ತಾ..?

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ 69ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉದ್ಯಾವರ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. 22ರ ಹರೆಯದ ಆ್ಯಡ್ಲಿನ್ ಕ್ಯಾಸ್ಟೆಲಿನೋ, ಉದ್ಯಾವರ ಮೂಲದ ಅಲ್ಫೋನ್ಸಸ್ ಕ್ಯಾಸ್ಟೆಲಿನೊ ಮತ್ತು ಮೀರಾ ಕ್ಯಾಸ್ಟೆಲಿನೊ ದಂಪತಿ ಪುತ್ರಿ.

Ad Widget ... ..

ವಿವಿಧ ಆನ್‌ಲೈನ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ನೇರವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದ್ದರು. ಕುವೈತ್ ನಲ್ಲಿ ಹುಟ್ಟಿ ಬೆಳೆದು, ಮುಂಬೈನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಆ್ಯಡ್ಲಿನ್, ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ್ದಾಗ ಉದ್ಯಾವರ ಚರ್ಚ್ ಆವರಣದಲ್ಲಿ ಅವರಿಗೆ ಹುಟ್ಟೂರ ಗೌರವ ಸನ್ಮಾನ ಸಲ್ಲಿಸಲಾಗಿತ್ತು.

Ad Widget

2020ರ ವಿಶ್ವ ಸುಂದರಿ ಕಿರೀಟ ಮಿಸ್ ಮೆಕ್ಸಿಕೊ ಆಂಡ್ರಿಯಾ ಮೆಜಾ ಪಾಲಾಗಿದ್ದು, ಬ್ರೆಝಿಲ್‌ನ ಜೂಲಿಯಾ ಗಾಮಾ 1ನೇ ರನ್ನರ್ ಅಪ್ ಮತ್ತು ಪೆರುವಿನ ಜಾನಿಕ್ ಮ್ಯಾಸೆಟಾ 2ನೇ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *