Ad Widget .

‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್

ಮಂಗಳೂರು: ಟ್ರೋಲಿಗರಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಮತ್ತೆ ಸುದ್ದಿಯಾಗುತ್ತಿದೆ. ಪ್ಲೈ ಓವರ್ ನ ಗೋಡೆಗಳು ಸುಂದರ ವರ್ಣರಂಜಿತ ವರ್ಲಿ ಚಿತ್ರಗಳಿಂದ ಕಂಗೊಳಿಸುತ್ತಿದ್ದು, ತನ್ನನ್ನು ಅಣಕಿಸಿದವರನ್ನು ಕೆಣಕುತ್ತಿದೆ. ಪ್ಲೈ ಓವರ್ ನ ಎರಡು ಬದಿ ರಸ್ತೆಗಳಲ್ಲಿ ಸಂಚರಿಸುವಾಗ ವರ್ಲಿ ಚಿತ್ತಾರಗಳು ಕಣ್ಣುಗಳಿಗೆ ಮುದನೀಡುತ್ತಿವೆ. ಮಂಗಳೂರಿನ ಆದಿತತ್ವ ಕಲಾವಿದರ ಬಳಗದ ಕುಂಚದಲ್ಲಿ ಮೂಡಿದ ಈ ವರ್ಲಿ ಚಿತ್ತಾರಗಳು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.ಕರ್ನಾಟಕ ಬ್ಯಾಂಕ್ ಸಹಕಾರದೊಂದಿಗೆ ರಸ್ತೆ ಗೋಡೆಗೆ ಬೇಸ್ ಪೈಂಟ್ ನಿಂದ ಅಂದಗೊಳಿಸಿ ವರ್ಲಿ ಕಲಾ ಪ್ರಕಾರದ ಮೂಲಕ ಕರಾವಳಿಯ ಜನಪದ,ಕಲೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ತಾರಗಳನ್ನು ಮಾಡಲಾಗಿದೆ.

Ad Widget . Ad Widget .

Ad Widget . Ad Widget .

ಈ ವರ್ಣಾಲಂಕಾರದ ಹಿಂದೆ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಸುಮಾರು ಇಪ್ಪತ್ತೈದು ಯುವಕಲಾವಿದರ ಕುಂಚದ ಪರಿಶ್ರಮವಿದೆ.ಉತ್ತಮ ಕಲಾ ನೈಪುಣ್ಯಗಾರರಾಗಿದ್ದು ಕೆಲವೇ ಕ್ಷಣಗಳಲ್ಲಿ ಬೆರಗು ಮೂಡಿಸುವಂತಹ ಚಿತ್ತಾರಗಳನ್ನು ಮೂಡಿಸುತ್ತಾರೆ. ಪಂಪ್ ವೆಲ್ ಸದಾ ಗಿಜಿಗುಡುವ ರಸ್ತೆಯಾಗಿರುದರಿಂದ ಸದ್ಯದ ಕೊರೋನಾ ಲಾಕ್ ಡೌನ್ ಕಲಾವಿದರಿಗೆ ಚಿತ್ರಬರೆಯಲು ಅನುಕೂಲವಾಗಿದೆ. ಮತ್ತೊಮ್ಮೆ ಪಂಪ್ ವೆಲ್ ಬಲೆ ,ಪಂಪ್ ವೆಲ್ ಬಲೆ ಟ್ರೋಲ್ ಹಾಡು ನೆನಪಿಸುವಂತೆ ವರ್ಲಿ ಚಿತ್ತಾರಗಳು ಕೈ ಬೀಸಿ ಬರಮಾಡಿಕೊಳ್ಳುತ್ತಿದೆ.

1 thought on “‘ಇತ್ತೆ ಪಂಪ್ವೆಲ್ ಬತ್ತ್ ತೂಲೆ’ ವರ್ಲಿ‌ಕಲೆಯಿಂದ ಕಂಗೊಳಿಸುತ್ತಿದೆ ಮಂಗಳೂರಿನ ಪಂಪ್ವೆಲ್”

  1. Pingback: “ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ – Samagra Sam

Leave a Comment

Your email address will not be published. Required fields are marked *