Ad Widget .

ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಎಬಿಡಿ. ಅಷ್ಟಕ್ಕೂ ಅವರೇನು ಹೇಳಿದ್ರು?

ಮೆಲ್ಬೋರ್ನ್.ಮೇ.18: ಆಧುನಿಕ ಕ್ರಿಕೆಟ್‌ ಲೋಕದ  ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ವಾಪಾಸ್ಸಾಗ್ತಾರೆ ಅಂತ  ಚಾತಕ ಪಕ್ಷಿಯಂತೆ ಕಾದುಕುಳಿತಿದ್ದ ಅಭಿಮಾನಿಗಳ ಪಾಲಿಗೆ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಏನು ಹೇಳಿದ್ರು?.

Ad Widget . Ad Widget .

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್‌ ದ.ಆಫ್ರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿರೀಕ್ಷೆ ಕೊನೆಗೂ ಸುಳ್ಳಾದಂತೆ ಆಗಿದೆ.
ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ  ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget . Ad Widget .

ಎಬಿಡಿ ನಾನಿನ್ನು ಕೋಚ್ ಮಾರ್ಕ್‌ ಬೌಷರ್ ಜತೆ ಮಾತುಕತೆ ನಡೆಸಿಲ್ಲ. ಕಳೆದ ವರ್ಷ ಬೌಷರ್‌, ನಿವೃತ್ತಿ ವಾಪಾಸ್ ಪಡೆದು ತಂಡ ಕೂಡಿಕೊಳ್ಳಲು ಇಷ್ಟವಿದೆಯಾ ಎಂದು ಕೇಳಿದ್ದರು. ನಾನದಕ್ಕೆ ಖಂಡಿತವಾಗಿಯೂ ಇಷ್ಟವಿದೆ ಎಂದು ಹೇಳಿದ್ದೆ ಎಂದು ಕಳೆದ ತಿಂಗಳ ಐಪಿಎಲ್‌ ವೇಳೆ ಆರ್‌ಸಿಬಿ ಕ್ರಿಕೆಟಿಗ ತಿಳಿಸಿದ್ದರು. ಇದೀಗ ತನ್ನ ಮಾತನ್ನು ವಾಪಾಸ್ಸು ತೆಗೆದುಕೊಂಡ ಎಬಿಡಿ ಟಿ20 ವಿಶ್ವಕಪ್ ನಲ್ಲಿ ಆಡಲಾರೆ ಎಂಬುದನ್ಜು ಸ್ಪಷ್ಟಪಡಿಸಿರುವುದಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಹೇಳಿದೆ.

Leave a Comment

Your email address will not be published. Required fields are marked *