Ad Widget .

ನಿದ್ದೆಗಣ್ಣಲ್ಲಿದ್ರಾ ಮುಕ್ಕ ಆಸ್ಪತ್ರೆ ಸಿಬ್ಬಂದಿ? ಇಂಥಾ ಅಚಾತುರ್ಯ ಮಾಡಿದವರನ್ನು ಏನ್ಮಾಡ್ಬೇಕು?

ಮಂಗಳೂರು. ಮೇ.17: ಇಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರೋದು ಅಂದ್ರೇನೆ ಜನ ಭಯ ಪಡ್ತಿದಾರೆ. ಅಂತದ್ದರಲ್ಲಿ ಇಂತಹ ತಪ್ಪನ್ನು ಮಾಡಿದ್ರೆ ನಿಜಕ್ಕೂ ಆಸ್ಪತ್ರೆಗೆ ಜನ ತಿರುಗೀನೂ ನೋಡಲ್ಲ. ಅಷ್ಟಕ್ಕೂ ಈ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾದ್ರೂ ಏನು? ಮುಂದೆ ಓದಿ.
ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಮೃತ ವ್ಯಕ್ತಿಗಳ ಶವ ಸಿಬ್ಬಂದಿ ಎಡವಟ್ಟಿನಿಂದ ಅದಲು ಬದಲಾದ ಘಟನೆ ನಡದಿದೆ.
ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿ ಜಗದೀಶ್ ಕುಂದರ್ (66) ಹಾಗೂ ಕಾರ್ಕಳದ ಸುಧಾಕರ ಶೆಟ್ಟಿ ಎಂಬವರು ಕೊರೊನಾದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Ad Widget . Ad Widget .

ಆಸ್ಪತ್ರೆಯ ಸಿಬ್ಬಂದಿ ಶವವನ್ನು ಪರಿಶೀಲಿಸದೆ ನೀಡಿದ್ದು ಸುರತ್ಕಲ್ ಹೊಸಬೆಟ್ಟು ನಿವಾಸಿ ಜಗದೀಶ್ ಕುಂದರ್ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಇತ್ತ ಜಗದೀಶ್ ಕುಂದರ್ ಕುಟುಂಬಸ್ಥರು ಆಸ್ಪತ್ರೆಗೆ ಬಂದು ಶವವನ್ನು ಪರಿಶೀಲಿಸಿದಾಗ ಶವ ಅದಲು ಬದಲಾಗಿದ್ದು ಕಂಡು ಬಂತು. ಕೂಡಲೇ ದೂರವಾಣಿ ಮುಖಾಂತರ ಸುಧಾಕರ್ ಶೆಟ್ಟಿ ಕುಟುಂಬಸ್ಥರನ್ನು ಸಂಪರ್ಕಿಸಿ ಮೃತ ಶರೀರದ ದಹನ ಕಾರ್ಯವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

Ad Widget . Ad Widget .

ಶವ ಅದಲು ಬದಲಾದ ಬಗ್ಗೆ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಬೇಜಾಬ್ದಾರಿಯಾಗಿ ವರ್ತಿಸಿದ್ದಾರೆ ಎಂದು ರೋಗಿ ಸಂಬಂಧಿಕರು ಆರೋಪಿಸಿದ್ದು ಸಿಬ್ಬಂದಿಗೆ ಜನ ಹಿಡಿಶಾಪ ಹಾಕ್ತಾ ಇದ್ದಾರೆ.

Leave a Comment

Your email address will not be published. Required fields are marked *